See also 2flip-flop
1flip-flop ಹ್ಲಿಪ್‍ಹ್ಲಾಪ್‍
ನಾಮವಾಚಕ
  1. (ಅಮೆರಿಕನ್‍ ಪ್ರಯೋಗ) ಹಿಂಲಾಗ; ಹಿಮ್ಮೊಗವಾಗಿ ಹೊಡೆದ ಲಾಗ, ಪಲ್ಟಿ.
  2. ಒಂದು ತೆರನ ಬಾಣಬಿರುಸು ಯಾ ಪಟಾಕಿ.
  3. ರಂಕರಾಟೆ; ವಿನೋದವಿಹಾರಕ್ಕಾಗಿ ಅರೆಗಳ ತುದಿಗಳಿಗೆ ನೇತುಹಾಕಿರುವ ಆಟದ ತೊಟ್ಟಿಲು ಮೊದಲಾದವುಗಳಲ್ಲಿ ಮನುಷ್ಯರನ್ನು ಕೂರಿಸಿ ತಿರುಗಿಸುವ ದೊಡ್ಡ ಚಕ್ರ.
  4. (ವಿದ್ಯುದ್ವಿಜ್ಞಾನ) ಹ್ಲಿಪ್‍ಹ್ಲಾಪ್‍; ಒಂದು ಸ್ಥಿರಸ್ಥಿತಿಯಿಂದ ಇನ್ನೊಂದಕ್ಕೆ, ಇಲ್ಲವೆ ಅಸ್ಥಿರಸ್ಥಿತಿಯಿಂದ ಮರಳಿ ಸ್ಥಿರಸ್ಥಿತಿಗೆ ಬದಲಾಯಿಸಬಹುದಾದ ಎಲೆಕ್ಟ್ರಾನಿಕ್‍ ಸ್ವಿಚಿಂಗ್‍ ಮಂಡಲ.
  5. ಮಟ್ಟಸವಾದ ಅಟ್ಟೆಯನ್ನೂ ಪಟ್ಟಿಗಳನ್ನೂ ಉಳ್ಳ ಪ್ಲಾಸ್ಟಿಕ್‍ ಯಾ ರಬ್ಬರ್‍ ಚಪ್ಪಲಿ.
See also 1flip-flop
2flip-flop ಹ್ಲಿಪ್‍ಹ್ಲಾಪ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ flip-flopped, ವರ್ತಮಾನ ಕೃದಂತ flip-flopping).
  1. ಹಿಂಲಾಗಹಾಕು; ಹಿಂಪಲ್ಟಿಹೊಡಿ; ಹಿಮ್ಮೊಗವಾಗಿ ಲಾಗಹಾಕು.
  2. (ಕದ ಮೊದಲಾದವು) ಬಡಿದಾಡು; ಹಿಂದಕ್ಕೂ ಮುಂದಕ್ಕೂ ಶಬ್ದವಾಗುವಂತೆ ಬಡಿ.