flinty ಹ್ಲಿಂಟಿ
ಗುಣವಾಚಕ
  1. ಚಕಮುಕಿಯ; ಚಕಮುಕಿಯುಳ್ಳ; ಚಕಮುಕಿಯಿಂದಾದ; ಚಕಮುಕಿ ಕಲ್ಲುತುಂಬಿರುವ.
  2. ಚಕಮುಕಿಯಂಥ; ಕಲ್ಲಿನಂತೆ ಗಡುಸಾಗಿರುವ; ಒರಟಾಗಿರುವ; ಪರುಷ: the bread was stale and flinty ಬ್ರೆಡ್ಡು ಹಳೆಯದಾಗಿ ಕಲ್ಲಿನಂತೆ ಗಡುಸಾಗಿತ್ತು.
  3. (ಭೌತಿಕವಲ್ಲದ ವಸ್ತು, ಸಂಗತಿಗಳ ವಿಷಯದಲ್ಲಿ) ಕಠಿಣ; ಪರುಷ; ಕ್ರೂರ: flinty ordinance of marriage ಮದುವೆಯ ಕ್ರೂರ ಕಾಯಿದೆ. flinty sentences ಪರುಷವಾಕ್ಯಗಳು.
  4. (ವ್ಯಕ್ತಿ, ಮನಸ್ಸು ಯಾ ಹೃದಯದ ವಿಷಯದಲ್ಲಿ)
    1. ಜಗ್ಗದ; ಸಗ್ಗದ; ಮಣಿಯದ; ನಿಷ್ಠುರ; ಮೊಂಡ; ಹಟದ; ಹಟಮಾರಿತನದ: a flinty pride ಮಣಿಯದ, ನಿಷ್ಠುರ ಸ್ವಾಭಿಮಾನ.
    2. ಕಲ್ಲಿನಂಥ; ಕಠಿಣ; ನಿರ್ದಯ; ಕಠೋರ; ಕ್ರೂರ.