flint ಹ್ಲಿಂಟ್‍
ನಾಮವಾಚಕ
  1. ಹ್ಲಿಂಟು; ಚಕಮುಕಿ ಕಲ್ಲು; ಹೆಚ್ಚುಕಡಮೆ ಶುದ್ಧ ಸಿಲಿಕದಿಂದಾದ, ಉಂಡೆ ಉಂಡೆಯಾಗಿ ಸಿಕ್ಕುವ, ಒಳಗೆ ಬೂದುಬಣ್ಣವೂ ಹೊರಗೆ ಬಿಳಿಯ ಬಣ್ಣವೂ ಇರುವ, ಒಂದು ಬಗೆಯ ಗಡಸು ಕಲ್ಲು.
  2. (ಚಕಮುಕಿ ಕಲ್ಲಿನಂಥ ಯಾವುದೇ) ಗಡಸುಪದಾರ್ಥ; ಗಟ್ಟಿವಸ್ತು.
  3. ಚಕಮುಕಿ ಉತ್ಪತ್ತಿಮಾಡಲು ಬಳಸುವ (ಮುಖ್ಯವಾಗಿ ಚಕಮುಕಿ ಚಾಪಿನ ಬಂದೂಕದಲ್ಲಿರುವಂಥ) ಚಕಮುಕಿ ಕಲ್ಲಿನ ತುಂಡು.
  4. ಕಿಡಿಗಲ್ಲು; ಸ್ವಯಂಚಾಲಿತ ಪೆಟ್ರೋಲ್‍ ಸಿಗರೇಟ್‍ ಲೈಟರ್‍ ಮೊದಲಾದವುಗಳಲ್ಲಿ ಕಿಡಿವುಂಟುಮಾಡಲು ಬಳಸುವ ವಿರಳಭಸ್ಮಲೋಹಗಳಿಂದಾದ ಮಿಶ್ರಲೋಹ.
  5. (ಚಕಮುಕಿ ಬಂದೂಕಿನಲ್ಲಿ ಕಿಡಿ ಹೊತ್ತಿಸಲು ಇಡುವ) ಚಕಮುಕಿ(ಕಲ್ಲು) ಹರಳು.
ಪದಗುಚ್ಛ

flint and steel ಬೆಂಕಿ (ಉತ್ಪತ್ತಿಮಾಡಲು ಬಳಸುತ್ತಿದ್ದ) ಚಕಮುಕಿ ಕಲ್ಲು ಮತ್ತು ಉಕ್ಕು.

ನುಡಿಗಟ್ಟು
  1. set one’s face like a flint ಗಟ್ಟಿ ಮನಸ್ಸಿನವನಾಗಿರು; ದೃಢಮನಸ್ಕನಾಗಿರು.
  2. skin a flint ಕಾಸಿನ ಕಿಲುಬನ್ನೂ ಬಿಡದಿರು; ಜಿಪುಣನಾಗಿರು; ಅತ್ಯಾಸೆಯಿಂದಿರು.
  3. wring water from a flint ಕಲ್ಲು ಹಿಂಡಿ ನೀರು ಪಡೆ; ಮರಳು ಹಿಂಡಿ ಎಣ್ಣೆ ತೆಗೆ; ಅಸಾಧ್ಯ ಕಾರ್ಯಮಾಡು; ಪವಾಡ ಸಾಧಿಸು.