See also 2fling
1fling ಹ್ಲಿಂಗ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ flung).
ಸಕರ್ಮಕ ಕ್ರಿಯಾಪದ
  1. (ಬೇಡದ ವಸ್ತು, ಕ್ಷಿಪಣಿ, ನೊರೆ, ದಾಳ, ಮೊದಲಾದವನ್ನು ರಭಸದಿಂದ) ಎಸೆ; ಎಸೆದುಬಿಡು; ಬೀರು; ಬಿಸಾಡು; ಒಗೆ.
  2. ಬೀಸು; ಜಾಡಿಸು; ರಭಸದಿಂದ ಆಡಿಸು: fling out one’s arms ತೋಳನ್ನು ಬೀಸು: fling one’s heels ಒದೆ; ಕಾಲುಗಳನ್ನು ಜಾಡಿಸು.
  3. ಎಸೆ; ಹಾಯಿಸು; ಬೀರು: fling one’s eyes ನಿರ್ಲಕ್ಷ್ಯದಿಂದ ಕಣ್ಣೆಸೆ; ಕಣ್ಣುಹಾಯಿಸು.
  4. (ಪ್ರಾಚೀನ ಪ್ರಯೋಗ) (ಶಬ್ದ, ವಾಸನೆ, ಬೆಳಕು ಮೊದಲಾದವನ್ನು) ಹೊರಡಿಸು; ಸೂಸು; ಚೆಲ್ಲು; ಎರಚು.
  5. (ಬಟ್ಟೆ, ಉಡುಪನ್ನು)
    1. ಸಿಕ್ಕಿಸಿಕೊ; ಬೇಕಾಬಿಟ್ಟಿ ಹಾಕಿಕೊ.
    2. ಸಿಕ್ಕಾಬಟ್ಟೆ ಬಿಚ್ಚಿ ಎಸೆ.
  6. (ಒಬ್ಬನನ್ನು ಬಲವಂತದಿಂದ ಯಾ ಇದ್ದಕ್ಕಿದ್ದ ಹಾಗೆ ಸೆರೆಮನೆಗೆ) ದಬ್ಬು; ನೂಕು.
  7. (ಸೇನಾದಳಗಳು ಮೊದಲಾದವನ್ನು ಶತ್ರುವಿನ ಯಾ ದುರ್ಗದ ಮೇಲೆ) ನುಗ್ಗಿಸು; ಆಕ್ರಮಣ ಮಾಡುವಂತೆ ಮಾಡು.
  8. (ಜಟ್ಟಿಯು ಎದುರಾಳಿಯನ್ನು, ಕುದುರೆಯು ಸವಾರನನ್ನು) ನೆಲಕ್ಕೆ – ಕೆಡವು, ಬೀಳಿಸು.
  9. (ಒಬ್ಬನ ತೆಕ್ಕೆಗೆ, ದೋಣಿ, ಮೊದಲಾದವಕ್ಕೆ) ಹಾರಿಕೊ; ಬೀಳು; ಅರ್ಪಿಸಿಕೊ: fling on one’s compassion ದಯೆಗೆ ಬೀಳು; ಒಬ್ಬನ ದಯೆ ಬೇಡಿ ಕಾಲುಕಟ್ಟಿಕೊ; ಕಾಲಿಗೆ ಬೀಳು. fling into an enterprise ಒಂದು ಉದ್ಯಮಕ್ಕೆ ನುಗ್ಗು; ಸಾಹಸಮಾಡು; ಶಕ್ತಿಈರಿ ಅದನ್ನು ಕೈಗೊಳ್ಳು. fling into one’s arms ಒಬ್ಬನ ತೋಳತೆಕ್ಕೆಗೆ ಹಾರು, ನೆಗೆ.
  10. ಕಟುವಾಗಿ – ಟೀಕಿಸು, ನಿಂದಿಸು, ಖಂಡಿಸು: he flung a sharp reply ಅವನು ತೀಕ್ಷ ಉತ್ತರದಿಂದ ಖಂಡಿಸಿದ.
  11. (ಮಾತುಗಳನ್ನು) ರಭಸದಿಂದ, ತೀವ್ರತೆಯಿಂದ – ನುಡಿ, ಆಡು, ಬೀರು.
ಅಕರ್ಮಕ ಕ್ರಿಯಾಪದ
  1. ಕೆರಳಿ, ದುಡದುಡನೆ, ರಭಸದಿಂದ ನುಗ್ಗು, ನಡೆ, ಹೊರಟುಹೋಗು: fling out of the room ಕೊಠಡಿಯಿಂದಾಚೆಗೆ ರಭಸದಿಂದ ಹೊರಟುಹೋಗು. flung away in a rage ರೇಗಿ ದುಡುದುಡನೆ ನಡೆದ.
  2. (ಕುದುರೆ, ಮೊದಲಾದವುಗಳ ವಿಷಯದಲ್ಲಿ) ಒದೆಯುತ್ತ ರಭಸದಿಂದ ಮುನ್ನುಗ್ಗು; ಹಿಡಿತಕ್ಕೆ ಸಿಕ್ಕದೆ – ಅಗಡಾಗಿರು, ತಂಟೆ ಮಾಡು, ಎತ್ತಿಹಾಕು.
  3. (ಮನುಷ್ಯನ ವಿಷಯದಲ್ಲಿ) ರೇಗಿಬೀಳು; ಬಯ್ಗುಳದ ಮಳೆಗರೆ: he flung out against the whole human race ಅವನು ಇಡೀ ಮಾನವಕೋಟಿಯ ಮೇಲೆ ಬಯ್ಗುಳದ ಮಳೆಗರೆದ.
ಪದಗುಚ್ಛ
  1. fling away
    1. ತೊರೆ; ತ್ಯಜಿಸು; ಕೈಬಿಡು,
    2. ಎಸೆ; ಬೀರು; ತೂರು.
    3. ಪೋಲುಮಾಡು; ವ್ಯರ್ಥಮಾಡು.
    4. ರಭಸದಿಂದ ಹೊರಟು ಹೋಗು.
  2. fling down ನೆಲಕ್ಕೆಸೆ; ನೆಲಕ್ಕೆ – ಕೆಡುವು, ಎತ್ತಿಹಾಕು.
  3. fling off (clothes) (ಬಟ್ಟೆಗಳನ್ನು) ಹೇಗೆಂದರೆ ಹಾಗೆ ಕಳಚಿ ಎಸೆ.
  4. fling on (clothes) (ಬಟ್ಟೆಗಳನ್ನು) ಹೇಗೆಂದರೆ ಹಾಗೆ ಹಾಕಿಕೊ.
  5. fling (one’s) eyes (up) on (ಒಬ್ಬನನ್ನು) ಅಲಕ್ಷ್ಯದಿಂದ ನೋಡು; (ಒಬ್ಬನತ್ತ) ಅಲಕ್ಷ್ಯದ ಕಣ್ಣೆಸೆ.
  6. to fling (door etc) open (ಬಾಗಿಲು ಮೊದಲಾದವನ್ನು) ರಭಸದಿಂದ, ದಡಾರನೆ – ಹಾರಬಡಿ, ತೆಗೆ: he flung the window open ಅವನು ಕಿಟಕಿಯನ್ನು ದಡಾರನೆ ತೆಗೆದ.
ನುಡಿಗಟ್ಟು

fling (fact etc.) in one’s teeth (ನಿಜಾಂಶ ಮೊದಲಾದವನ್ನು) ಮುಖದ ಮೇಲೆ ಎಸೆ; ಎದುರಿಗೆ ಹೊರಗೆಡಹು; ಎದುರೆದುರಿಗೆ ಮಂಡಿಸು.

See also 1fling
2fling ಹ್ಲಿಂಗ್‍
ನಾಮವಾಚಕ
  1. ಎಸೆತ; ಒಗೆತ; ಬೀಸು.
  2. ಅಮಲೇರಿದ ನೃತ್ಯ; ಉದ್ರೇಕದ ಕುಣಿತ: Highland fling (ಸ್ಕಾಟ್ಲಂಡಿನ) ಗುಡ್ಡಗಾಡಿನ ಆವೇಶದ ನೃತ್ಯ.
  3. ನುಗ್ಗಾಟ; ನುಗ್ಗುವಿಕೆ; ರಭಸದ – ನುಗ್ಗು. ಚಲನೆ, ನುಗ್ಗಲು.
  4. (ಕುದುರೆ) ಒದ್ದು ಓಡುವುದು.
  5. ಸ್ವೇಚ್ಛೆ; ಸ್ವೇಚ್ಛಾಚಾರ; ಸ್ವೇಚ್ಛಾ – ವರ್ತನೆ, ನಡವಳಿಕೆ; ಇಷ್ಟ ಯಾ ಖುಷಿ ಬಂದಂತೆ ಇರುವುದು; ಮನಸ್ಸಿಗೆ ತೋರಿದಂತೆ ನಡೆಯುವುದು: determined to have his last fling before he sailed ಅವನು ಹಡಗು ಹತ್ತಿ ಹೊರಟು ಹೋಗುವುದಕ್ಕೆ ಮುಂಚೆ ಕೊನೆಬಾರಿ, ಸ್ವೇಚ್ಛೆಯಿಂದ ಇರಲು ನಿರ್ಧರಿಸಿದ.
ನುಡಿಗಟ್ಟು
  1. fling oneself at someone’s head (ಒಬ್ಬನ) ಮನವೊಲಿಸಲು ಹೆಚ್ಚಾಗಿ ಪ್ರಯತ್ನ ಪಡು.
  2. have a fling at
    1. ಪ್ರಯತ್ನಿಸು; ಕೈ ಹಾಕು: he took a fling at play writing ಅವನು ನಾಟಕ ರಚನೆಗೆ ಕೈ ಹಾಕಿದ.
    2. ಚುಚ್ಚಿ, ಅಣಕಿಸಿ – ಮಾತನಾಡು; ಗೇಲಿಮಾಡು; ಕುಚೋದ್ಯಮಾಡು: she often takes a fling at my taste in neckties ನೆಕ್‍ಟೈಗಳ ಬಗೆಗೆ ನನಗಿರುವ ಅಭಿರುಚಿಯನ್ನು ಅವಳು ಆಗಾಗ ಗೇಲಿಮಾಡುತ್ತಾಳೆ.
  3. have one’s fling ಖುಷಿ ಬಂದಹಾಗೆ ಇರು; ತನಗಿಷ್ಟಬಂದ ರೀತಿಯಲ್ಲಿರು.
  4. take a fling at = ನುಡಿಗಟ್ಟು \((2)\).