See also 2flimsy
1flimsy ಹ್ಲಿಮ್‍ಸಿ
ಗುಣವಾಚಕ
  1. (ಬಟ್ಟೆ ಮೊದಲಾದವುಗಳ ವಿಷಯದಲ್ಲಿ) ಸುಲಭವಾಗಿ – ಅಳಿದುಹೋಗುವ, ನಶಿಸುವ, ಹಾಳಾಗುವ.
  2. ಅತಿ ನಾಜೂಕಾದ; ಬಹಳ ಸೂಕ್ಷ್ಮವಾದ; ನವಿರಾದ.
  3. ಜಾಳಾದ; ಸಡಿಲವಾದ; ಸುಲಭವಾಗಿ – ಬೇರೆಯಾಗುವ, ಬಿಟ್ಟುಕೊಳ್ಳುವ.
  4. (ಅಭೌತಿಕ ವಸ್ತುಗಳ ವಿಷಯದಲ್ಲಿ) ಅಲ್ಪ; ಕ್ಷುಲ್ಲಕ; ಜುಜುಬಿ; ಕೆಲಸಕ್ಕೆ ಬಾರದ.
  5. ತಿರುಳಿಲ್ಲದ; ಹುರುಳಿಲ್ಲದ; ನಿಸ್ಸತ್ತ್ವದ; ಮೇಲ್ಮೇಲಿನ; ಹೊರನೋಟದ; ತೋರ್ಕೆಯ; ಅಂತಸ್ಸತ್ತ್ವವಿಲ್ಲದ.
See also 1flimsy
2flimsy ಹ್ಲಿಮ್‍ಸಿ
ನಾಮವಾಚಕ
  1. (ಅಶಿಷ್ಟ) ಬ್ಯಾಂಕು ನೋಟುಗಳು; ಕಾಗದದ ಹಣ.
  2. ತೆಳು ನವಿರು – ಕಾಗದ.
  3. ತೆಳುಕಾಗದದ ಮೇಲಿನ ದಾಖಲೆ.
  4. ಕ್ಷುಲ್ಲಕ ವಸ್ತು; ಜುಜುಬಿ ಪದಾರ್ಥ.