flier ಹ್ಲೈಅರ್‍
ನಾಮವಾಚಕ
  1. ಹಾರುಗ; ಹಾರಾಡುವ ಹಕ್ಕಿ ಮೊದಲಾದವು: high flier ಎತ್ತರದಲ್ಲಿ ಹಾರುವ ಹಕ್ಕಿ. poor flier ಚೆನ್ನಾಗಿ ಹಾರಲಾರದ ಹಕ್ಕಿ.
  2. (ಆಡುಮಾತು) ಮಹತ್ವಾಕಾಂಕ್ಷಿ; ಮಹತ್ವಾಕಾಂಕ್ಷೆಯ ಮನುಷ್ಯ.
  3. (ಆಡುಮಾತು) ಪ್ರಮುಖ ಯಾ ಶ್ರೇಷ್ಠ ವ್ಯಕ್ತಿ.
  4. ಅತಿವೇಗದಲ್ಲಿ ಚಲಿಸುವ ಪ್ರಾಣಿ, ವಾಹನ, ಮೊದಲಾದವು.
  5. ವಿಮಾನಚಾಲಕ ಯಾ ವಿಮಾನಚಾಲಕಿ; ವಿಮಾನ ನಡೆಸುವ ವ್ಯಕ್ತಿ.
  6. ಹಾರುಜಿಗಿತ; ಓಡುತ್ತಾ ಹೋಗಿ ಕೊನೆಯಲ್ಲಿ ಹಾರುವ ನೆಗೆತ.
  7. ವಿಮಾನ.
  8. (ಅಮೆರಿಕನ್‍ ಪ್ರಯೋಗ) ಚಿಕ್ಕ ಕರಪತ್ರ; ಹಸ್ತಪತ್ರಿಕೆ.
  9. (ಅಮೆರಿಕನ್‍ ಪ್ರಯೋಗ) ಸಟ್ಟಾವ್ಯಾಪಾರದ ಬಂಡವಾಳ.