flexile ಹ್ಲೆಕ್ಸೈಲ್‍
ಗುಣವಾಚಕ

(ಪ್ರಾಚೀನ ಪ್ರಯೋಗ)

  1. ನಮ್ಯ; ಸಲೀಸಾಗಿ ಬಗ್ಗುವ; ಸರಾಗವಾಗಿ ಬಗ್ಗಿಸಲಾಗುವ.
  2. (ಮುಖಲಕ್ಷಣಗಳು ಮೊದಲಾದವುಗಳ ವಿಷಯದಲ್ಲಿ) ಚಂಚಲ; ಬದಲಾಗುವ; ವ್ಯತ್ಯಾಸವಾಗುವ; ಪರಿವರ್ತನಶೀಲ: with flexile features he was telling his tale ಕ್ಷಣೇಕ್ಷಣೇ ಬದಲಾಯಿಸುತ್ತಿದ್ದ ಮುಖಭಾವಗಳಿಂದ ಅವನು ತನ್ನ ಕಥೆ ಹೇಳುತ್ತಿದ್ದ.
  3. ಹೇಳಿದಂತೆ ನಡೆಸಲಾಗುವ ಯಾ ಬಗ್ಗುವ; ಬೇಕಾದಂತೆ – ತಿರುಚಬಲ್ಲ; ತಿರುಗಿಸಬಲ್ಲ: she was so flexile that he moved her to his pleasure ಆಕೆಯನ್ನವನು ತನ್ನ ಖುಷಿಬಂದಂತೆ ತಿರುಗಿಸುತ್ತಿದ್ದ; ಆಕೆ ಹೇಳಿದಂತೆ ನಡೆಸಬಲ್ಲವಾಗಿದ್ದಳು.
  4. (ಉದ್ದೇಶಗಳಿಗೆ. ಸಂದರ್ಭಗಳಿಗೆ) ಹೊಂದಿಕೊಳ್ಳಬಲ್ಲ ಯಾ ಸರಿಹೊಂದುವಂತ.