See also 2fleece
1fleece ಹ್ಲೀಸ್‍
ನಾಮವಾಚಕ
  1. (ಕುರಿ ಯಾ ಅದರಂತಹ ಪ್ರಾಣಿಗಳ ಹೊದಿಕೆಯಾಗಿರುವ) ತುಪ್ಪಟ; ಉಣ್ಣೆ.
  2. ಒಂದು ಸಲದ ಒಂದು ಪಟ್ಟಿನ ಉಣ್ಣೆ; ಒಂದು ಕುರಿಯಿಂದ ಒಂದು ಸಲಕ್ಕೆ ಕತ್ತರಿಸಿ ತೆಗೆದ ಉಣ್ಣೆಯ ಮೊತ್ತ.
  3. ಉಣ್ಣೆಗೂದಲು; ಪೊದೆಗೂದಲು; ಬಿರುಗೂದಲು; ಒರಟಾದ, ಸಮೃದ್ಧವಾದ ಯಾ ಉಣ್ಣೆಯಂತಿರುವ ತಲೆಗೂದಲು.
  4. ಉಣ್ಣೆಯಂತಿರುವ ಯಾವುದೇ ವಸ್ತು, ಉದಾಹರಣೆಗೆ ಬಿಳಿ ಮೋಡ, ಬೀಳುತ್ತಿರುವ ಹಿಮದ ಹಲ್ಲೆಗಳು ಮೊದಲಾದವು.
  5. ಉಣ್ಣೆ ರೇಷ್ಮೆ; ಉಡುಪು ಮೊದಲಾದವುಗಳ ಒಳಪದರವಾಗಿ ಬಳಸುವ, ರೇಷ್ಮೆಯಂತಿರುವ, ಮೃದುವಾದ ಹತ್ತಿ ಬಟ್ಟೆ.
  6. ಉಣ್ಣೆಹಾಳೆ; (ಎಕ್ಕುವಾಗ ಬರುವ) ಹತ್ತಿಯ ಯಾ ಉಣ್ಣೆಯ ಎಳೆಗಳ ತೆಳುವಾದ ಹಾಳೆ.
  7. (ವಂಶಲಾಂಛನ ವಿದ್ಯೆ) ಉಣ್ಣೆ; ಮಧ್ಯದಲ್ಲಿ ಬಳೆಯಿಂದ ನೇತು ಹಾಕಿರುವಂತೆ ಚಿತ್ರಿಸಿರುವ ತುಪ್ಪಟ, ತುಪ್ಪಟವಿರುವ ಕುರಿಯ ಚರ್ಮ.
ಪದಗುಚ್ಛ

Golden Fleece

  1. ಆಸ್ಟ್ರಿಯದಲ್ಲಿ ಮತ್ತು ಸ್ಪೇನಿನಲ್ಲಿ ‘ನೈಟ್‍’ ಪದವಿ ಪಡೆದವರ ವರ್ಗ.
  2. (ಗ್ರೀಕ್‍ ಪುರಾಣ) ಹೊನ್ನತುಪ್ಪಟ; ಜೇಸನ್ನನು ಹುಡುಕಿ ಗೆದ್ದು ತಂದ ಚಿನ್ನದ ತುಪ್ಪಟ, ಉಣ್ಣೆ.
See also 1fleece
2fleece ಹ್ಲೀಸ್‍
ಸಕರ್ಮಕ ಕ್ರಿಯಾಪದ
  1. ಕುರಿಯ ತುಪ್ಪಟ ಕತ್ತರಿಸು.
  2. (ಹಣ, ಆಸ್ತಿ, ಮೊದಲಾದವನ್ನು) ಸುಲಿದುಕೊ; ಕಸಿದುಕೊ; ಕಿತ್ತುಕೊ; ಬಲವಂತವಾಗಿ ವಸೂಲು ಮಾಡು.
  3. (ತುಪ್ಪಟದಿಂದ ಮುಚ್ಚಿದಂತೆ) ಮುಚ್ಚು; ಹೊದಿಸು; ಆವರಿಸು: the sky fleeced with clouds ಮೋಡಗಳ ತುಪ್ಪಟ ಹೊದಿಸಿದ ಆಕಾಶ.