flee ಹ್ಲೀ
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ fled).
  1. (ವ್ಯಕ್ತಿ, ಸ್ಥಳ, ಮೊದಲಾದವನ್ನು) ಬಿಟ್ಟು ಓಡಿಹೋಗು; ಇದ್ದಕ್ಕಿದ್ದಂತೆ ಪಲಾಯನ ಮಾಡು; ಏಕಾಏಕಿ ಬಿಟ್ಟು ಹೊರಟುಹೋಗು.
  2. (ಊರು ಮೊದಲಾದವನ್ನು) ತೊರೆದುಬಿಡು; ತ್ಯಜಿಸು; ಬಿಟ್ಟು ದೂರವಾಗು; ದೂರಸರಿ; ದೂರಹೋಗು.
ಅಕರ್ಮಕ ಕ್ರಿಯಾಪದ
  1. (ಅಪಾಯ ಮೊದಲಾದವುಗಳಿಂದ) ಓಡಿ ಹೋಗು; ತಲೆತಪ್ಪಿಸಿಕೊಂಡು ಹೋಗು; ಪಲಾಯನ ಮಾಡು.
  2. ಓಡಿಹೋಗಿ ತಪ್ಪಿಸಿಕೊ, ಪಲಾಯನ ಮಾಡಿ ರಕ್ಷಿಸಿಕೊ.
  3. (ಕಾಲ, ಆರೋಗ್ಯ, ಉಸಿರು, ಮಂಜು, ಮೊದಲಾದವುಗಳ ವಿಷಯದಲ್ಲಿ) ಮರೆಯಾಗು; ಅದೃಶ್ಯವಾಗು; ಮಾಯವಾಗು; ಇಲ್ಲದಾಗು; ಅಳಿಯು; ತೀರಿಹೋಗು; ಮುಗಿದುಹೋಗು.