flea ಹ್ಲೀ
ನಾಮವಾಚಕ
  1. ಚಿಗಟ; ಚಿಕ್ಕಾಟ; ಚಿಕ್ಕಾಡು; ಮನುಷ್ಯನ ಮತ್ತು ಇತರ ಪ್ರಾಣಿಗಳ ರಕ್ತ ಹೀರಿ ಜೀವಿಸುವ, ರೆಕ್ಕೆಯಿಲ್ಲದ ಒಂದು ಬಗೆಯ ಹುಳು. Figure: flea-1
  2. ಚಿಗಟ; ಯಾವುದೇ ಅತಿ ಸಣ್ಣ, ತಿರಸ್ಕಾರಕ್ಕೊಳಗಾಗುವಂಥ ಪ್ರಾಣಿ: these Lilliputians would not have floored a flea ಈ ಲಿಲಿಪುಟನ್‍ ಜನ ಒಂದು ಚಿಗಟವನ್ನು ಸಹ ಹೊಡೆದುರುಳಿಸಲಾರದವರಾಗಿದ್ದರು.
  3. (ಹಾಪ್ಸ್‍ ಕೋಸು ಮೊದಲಾದ ಬೆಳೆಯನ್ನು ನಾಶಮಾಡುವ) ಒಂದು ಬಗೆಯ ಜಿಗಿ ಕೀಟ, ಹಾರು ಹುಳು.
ನುಡಿಗಟ್ಟು

send one away with a flea in his ear ಒಬ್ಬನನ್ನು ಮುಖಭಂಗಮಾಡಿ, ಇಲ್ಲವೆ ನೋಡಲು ನಿರಾಕರಿಸಿ ಕಳುಹಿಸಿಬಿಡು.