flawlessness ಹ್ಲಾಲಿಸ್‍ನಿಸ್‍
ನಾಮವಾಚಕ
  1. ಬಿರುಕು, ಒಡಕು, ಹರಕು – ಇಲ್ಲದಿರುವಿಕೆ.
  2. ಕೊರತೆ ಇಲ್ಲದಿರುವುದು; ಕುಂದಿಲ್ಲದಿರುವುದು; ಅನ್ಯೂನತೆ; ಲೋಪವಿಲ್ಲದಿರುವಿಕೆ.
  3. ತಪ್ಪಿಲ್ಲದಿರುವಿಕೆ; ಐಬಿಲ್ಲದಿರುವಿಕೆ; ನಿರ್ದೋಷತೆ; ದೋಷರಹಿತತೆ; ನಿಷ್ಕಳಂಕತೆ.
  4. (ನ್ಯಾಯಶಾಸ್ತ್ರ) ನಿರ್ದುಷ್ಟತೆ; ಲೋಪದೋಷರಾಹಿತ್ಯ; (ದಸ್ತಾವೇಜು ಮೊದಲಾದವುಗಳಲ್ಲಿ ಅದನ್ನು ಕಾನೂನು ದೃಷ್ಟಿಯಿಂದ) ನಿಷ್ಪ್ರಯೋಜಕಗೊಳಿಸುವಂಥ ದೋಷ ಮೊದಲಾದವು ಇಲ್ಲದಿರುವಿಕೆ.