See also 2flavour
1flavour ಹ್ಲೇವರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. (ಆಹಾರ ಪಾನೀಯಗಳ, ಹಿತಕರವಾದ) ಕಂಪು; ಸುವಾಸನೆ; ಪರಿಮಳ.
  2. ಸವಿ; ರುಚಿಸುಗಂಧ; ರುಚಿಸುವಾಸನೆ; ರುಚಿಪರಿಮಳ; ಸುಗಂಧವೂ, ಒಳ್ಳೆಯ ರುಚಿಯೂ ಕೂಡಿರುವ ಸಂವೇದನೆ ಯಾ ಇಂದ್ರಿಯಾನುಭವ: when you have a cold, your food sometimes has very little flavour ನಿಮಗೆ ನೆಗಡಿಯಾದಾಗ ನಿಮ್ಮ ಆಹಾರಕ್ಕೆ ಕೆಲವು ಸಲ ರುಚಿಯೂ ಇರುವುದಿಲ್ಲ, ವಾಸನೆಯೂ ಇರುವುದಿಲ್ಲ.
  3. (ವಿವರಿಸಲಾಗದ ಯಾವುದೇ) ವೈಶಿಷ್ಟ್ಯ; ವೈಲಕ್ಷಣ್ಯ; ವಿಶಿಷ್ಟ ಗುಣ; ಮಾಧುರ್ಯ; ಸವಿ; ಸೊಗಡು: the flavour of Socratic irony ಸಾಕ್ರಟೀಸನ ವಿಡಂಬನದ ಸೊಗಡು.
  4. (ವಿಶಿಷ್ಟವಾದ) ರುಚಿ; ರಸ.
  5. ನಾತ; ದುರ್ವಾಸನೆ; ದುರ್ಗುಣ; (ಸಾಮಾನ್ಯವಾಗಿ ಯಾವುದೇ ಕೆಟ್ಟ) ಗುಣದಿಂದ, ವಾಸನೆಯಿಂದ – ಸ್ವಲ್ಪ ಕೂಡಿರುವುದು: there is a flavour of arrogance about him ಅವನಲ್ಲಿ ಸೊಕ್ಕಿನ ವಾಸನೆ ಇದೆ.
See also 1flavour
2flavour ಹ್ಲೇವರ್‍
ಸಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ) ಸುವಾಸನೆ ಮತ್ತು ರುಚಿಯನ್ನು – ನೀಡು, ಉಂಟುಮಾಡು; ಪರಿಮಳ ಮತ್ತು ರುಚಿ – ಕಟ್ಟು, ಕೊಡು; ಸವಿ ಉಂಟು ಮಾಡು; ಮಧುರಗೊಳಿಸು; ಕಂಪುಂಟುಮಾಡು.