flatter ಹ್ಲಾಟರ್‍
ಸಕರ್ಮಕ ಕ್ರಿಯಾಪದ
  1. (ದಯೆ ಸಂಪಾದಿಸಲು) ಅನುಸರಣೆಮಾಡು; ಮರ್ಜಿ ಹಿಡಿ; ಮಿತಿ ಈರಿದ ನಮ್ರತೆ ತೋರಿಸು; ದಾಸಾನುದಾಸನಂತೆ ವರ್ತಿಸು.
  2. ಅತಿಯಾಗಿ ಮುಖಸ್ತುತಿ ಮಾಡು; ಮಿತಿಈರಿ ಹೊಗಳು.
  3. ಒಬ್ಬನ ಅಹಂಭಾವಕ್ಕೆ ಪ್ರೋತ್ಸಾಹ ಕೊಡು; ಯೋಗ್ಯತೆ ಇಲ್ಲದಿದ್ದರೂ ಶ್ಲಾಘಿಸು; ಗೌರವಿಸಲ್ಪಟ್ಟಿದ್ದೇನೆಂಬ ಭಾವನೆ ಹುಟ್ಟಿಸು: I feel greatly flattered by your invitation ನಿಮ್ಮ ಆಹ್ವಾನದಿಂದ ನಾನು ಗೌರವಿಸಲ್ಪಟ್ಟಿದ್ದೇನೆಂದು ಭಾವಿಸುತ್ತೇನೆ.
  4. (ಮುಖ್ಯವಾಗಿ ಆಧಾರವಿಲ್ಲದ) ಪ್ರತೀಕ್ಷೆ ಹುಟ್ಟಿಸು; ಇಲ್ಲದ ಭರವಸೆ ಹುಟ್ಟಿಸು.
  5. (-ಎಂಬ) ನಂಬಿಕೆಯಿಂದ ಸಂತೋಷಪಟ್ಟುಕೊ ಯಾ ಭ್ರಾಂತಿಗೊಳಗಾಗು.
  6. (ಕಣ್ಣು, ಕಿವಿ, ಮೊದಲಾದವನ್ನು) ತಣಿಸು; ತೃಪ್ತಿಪಡಿಸು.
  7. (ಪ್ರತಿರೂಪ, ಚಿತ್ರಕಾರ, ಮೊದಲಾದವರ ವಿಷಯದಲ್ಲಿ) ಇರುವುದಕ್ಕಿಂತ ಹೆಚ್ಚು ಅಂದವಾಗಿಸು; ಇನ್ನೂ ಅಂದವಾಗಿ ಕಾಣುವಂತೆ ಮಾಡು: the picture flatters her ಚಿತ್ರವು ಅವಳು ಇರುವುದಕ್ಕಿಂತ ಹೆಚ್ಚು ಅಂದವಾಗಿ ಕಾಣುವಂತೆ ಮಾಡಿದೆ.
ಪದಗುಚ್ಛ

flattering unction ಆತ್ಮತೃಪ್ತಿಗಾಗಿ ಯಾ ಆತ್ಮಾಭಿಮಾನಕ್ಕಾಗಿ ಮಾಡಿಕೊಳ್ಳುವ ಸಮಾಧಾನ.