flatten ಹ್ಲಾಟನ್‍
ಸಕರ್ಮಕ ಕ್ರಿಯಾಪದ
  1. ಮಟ್ಟವಾಗಿಸು; ಸಮನಾಗಿಸು; ಒಂದೇ ಸಮನಾಗಿಸು.
  2. ಅಪ್ಪಚ್ಚಿಮಾಡು; ಚಟ್ಟೆಮಾಡು; ಚಪ್ಪಟೆಮಾಡು.
  3. ನೆಲಸಮವಾಗಿಸು; ನೆಲದ ಮೇಲೆ ಚಪ್ಪಟೆಯಾಗಿ – ಕೆಡಹು, ಎಸೆ, ಮಲಗಿಸು: the hurricane flattened the forest ಬಿರುಗಾಳಿ ಅರಣ್ಯವನ್ನು ನೆಲಸಮಗೊಳಿಸಿತು.
  4. ಕುಗ್ಗಿಸು; ಸೊರಗಿಸು: was flattened by grief ದುಃಖದಿಂದ ಕುಗ್ಗಿಹೋದ.
  5. ಆವರಿಸಿಬಿಡು; ಕವಿದುಬಿಡು; ಮುಳುಗಿಸು.
  6. ಭೂಗತಮಾಡು; ಹಾಳು ಮಾಡು; ಕೊಲ್ಲು; ಕೊಂದು ಉರುಳಿಸು.
  7. ನಿಸ್ಸಹಾಯಕನಾಗುವಷ್ಟು – ಕುಡಿಸು, ಅಮಲೇರಿಸು.
  8. ಸಪ್ಪೆಯಾಗಿ ತೋರುವಂತೆ ಮಾಡು; ನೀರಸಗೊಳಿಸು.
  9. (ಬಣ್ಣ) ನಿಸ್ತೇಜಗೊಳಿಸು; ಮಬ್ಬುಮಾಡು; ಮಂಕಾಗಿಸು; ಮಬ್ಬಾಗುವಂತೆ ಬಣ್ಣ ಬಳಿ.
  10. ಅವಮಾನಗೊಳಿಸು; ತೇಜೋವಧೆಮಾಡು.
  11. (ಸಂಗೀತ) ಅರ್ಧಸ್ವರ – ಇಳಿಸು, ಕಡಮೆಮಾಡು.
ಅಕರ್ಮಕ ಕ್ರಿಯಾಪದ
  1. ಚಪ್ಪಟೆಯಾಗು.
  2. ಸಪ್ಪೆಯಾಗು; ನೀರಸವಾಗು; ನಿಸ್ತೇಜವಾಗು; ಮಬ್ಬಾಗು.
  3. ಮಟ್ಟಸವಾಗು; ನೆಲಸಮವಾಗು.
  4. ಇಳಿಜಾರಾಗು; ಕೆಳಗಿಳಿ: hills flattening into coastal plains ಬೆಟ್ಟಗಳು ಕರಾವಳಿ ಮೈದಾನಕ್ಕೆ ಇಳಿಜಾರಾಗುತ್ತಾ.
  5. ಒಂದೇ ಸಮನಾಗು; ಒಂದೇ ಮಟ್ಟಕ್ಕೆ ಬರು; ಏಕರೀತಿಯಾಗು; ಸಮತೋಲನ ಸ್ಥಿತಿಗೆ ಬರು: prices are expected to flatten out after the holiday ರಜ ಕಳೆದ ಮೇಲೆ ಬೆಲೆಗಳು ಸಮಸ್ಥಿತಿಗೆ ಬರಬಹುದೆಂದು ನಿರೀಕ್ಷೆ.
  6. (ಕೆಲಸಮಾಡಲು) ಶ್ರಮವಹಿಸು; ದುಡಿ: he rose refreshed and flattened to the task to grubbing roots ದಣಿವಾರಿಸಿಕೊಂಡು ಎದ್ದು ಅವನು ಬೇರುಗಳನ್ನು ಕಿತ್ತುಹಾಕುವ ಶ್ರಮಸಾಧ್ಯ ಕೆಲಸಕ್ಕೆ ಸಿದ್ಧನಾದ.
  7. (ಸಂಗೀತ) ಅರ್ಧಸ್ವರಇಳಿ, ಕಡಮೆಯಾಗು.
ಪದಗುಚ್ಛ

flatten out (ವಾಯುಯಾನ) ವಿಮಾನವನ್ನು ಭೂಮಿಗೆ ಸಮಾಂತರ ಮಾಡು, ಸಮಾಂತರಗೊಳಿಸು.