flatly ಹ್ಲಾಟ್‍ಲಿ
ಕ್ರಿಯಾವಿಶೇಷಣ
  1. ಚಪ್ಪಟೆಯಾಗಿ; ಮಟ್ಟಸವಾಗಿ; ಏರುಪೇರಿಲ್ಲದೆ.
  2. ಖಡಾಖಂಡಿತವಾಗಿ; ನಿಸ್ಸಂಕೋಚವಾಗಿ; ನಿರ್ದಾಕ್ಷಿಣ್ಯವಾಗಿ; ಸ್ಪಷ್ಟವಾಗಿ; ಜೋರಾಗಿ; ಒರಟಾಗಿ: he flatly denied the charges ಅವನು ಆಪಾದನೆಗಳನ್ನು ಖಡಾಖಂಡಿತವಾಗಿ ನಿರಾಕರಿಸಿದ.
  3. ಸಂಪೂರ್ಣವಾಗಿ; ಪೂರ್ತಿಯಾಗಿ: acting flatly against his convictions ತನ್ನ ದೃಢ ನಂಬಿಕೆಗಳಿಗೆ ಸಂಪೂರ್ಣ ವಿರೋಧವಾಗಿ ನಡೆದುಕೊಂಡು.
  4. ನಿರುತ್ಸಾಹದಿಂದ; ನೀರಸವಾಗಿ; ಮಂಕಾಗಿ; ಜಡವಾಗಿ; ಗೆಲವಿಲ್ಲದೆ; ನಿರಾಸಕ್ತನಾಗಿ; ಏನೂ ಉಮೇದಿಲ್ಲದಂತೆ; ಖಿನ್ನನಾಗಿ.
  5. ಒಂದೇಸಮನೆ; ವ್ಯತ್ಯಾಸವಿಲ್ಲದೆ; ಏಕತಾನದಲ್ಲಿ; ಒಂದೇ ಸ್ವರದಲ್ಲಿ; ಬೇಸರ ಬರುವಂತೆ: droned on flatly about her troubles ತನ್ನ ತಾಪತ್ರಯಗಳನ್ನು ಕುರಿತು ಅವಳು ಒಂದೇಸಮನಾಗಿ ಕೊರೆದಳು.