See also 2flat  3flat  4flat  5flat
1flat ಹ್ಲಾಟ್‍
ನಾಮವಾಚಕ

ಹ್ಲ್ಯಾಟು: (ಹಜಾರ, ಮಲಗುವ ಕೋಣೆ, ಆಡಿಗೆಮನೆ, ಮೊದಲಾದವುಗಳಿಂದ ಕೂಡಿದ್ದು, ಕಟ್ಟಡದ ಒಂದೇ ಅಂತಸ್ತಿನಲ್ಲಿರುವ, ಸಂಸಾರವೊಂದರ ವಾಸಕ್ಕೆ ಯೋಗ್ಯವಾಗಿರುವ) ವಸತಿಗೃಹ ಯಾ ವಾಸದ ಕೋಣೆಗಳ ತಂಡ.

See also 1flat  3flat  4flat  5flat
2flat ಹ್ಲಾಟ್‍
ಗುಣವಾಚಕ
  1. ಅಡ್ಡನಾದ; ನೆಲಸಮಾನ; ಹತ್ತನಾಗಿರುವ; ಸಮತಲವಾಗಿರುವ.
  2. ಹರಡಿಕೊಂಡಿರುವ; ವಿಸ್ತರಿಸಿರುವ.
  3. ಉದ್ದುದ್ದ; ಉದ್ದಕ್ಕೂ ಬಿದ್ದಿರುವ: fell flat ನೆಲಸಮವಾಗಿ ಬಿದ್ದಿತು. flat aganist the wall ಗೋಡೆಗೆ ಹತ್ತನಾಗಿ. with the flat hand (ತೆರೆದ) ಅಂಗೈಯಿಂದ.
  4. ಒಂದೇ ಸಮನಾದ; ನಯವಾದ; ಹಳ್ಳದಿಣ್ಣೆಗಳಿಲ್ಲದ; ಉಬ್ಬುತಗ್ಗುಗಳಿಲ್ಲದ.
  5. (ಬಣ್ಣದ ಛಾಯೆಯ ವಿಷಯದಲ್ಲಿ) ಏಕರೀತಿಯಾದ; ಒಂದೇ ಸಮನಾದ: flat tint ಹೆಚ್ಚು ಕಡಿಮೆಯಾಗಿರದ, ಒಂದೇ ಸಮನಾದ – ವರ್ಣಛಾಯೆ.
  6. ಚಪ್ಪಟೆಯಾದ; ಸಪಾಟಾದ; ಮಟ್ಟವಾಗಿರುವ: flat nose ಚಪ್ಪಟೆ ಮೂಗು.
  7. ಸುವ್ಯಕ್ತ; ಸ್ಪಷ್ಟ; ಖಚಿತ; ಖಂಡಿತ; ಶುದ್ಧ; ಕೇವಲ; ಅಚ್ಚ; ನಿಸ್ಸಂಕೋಚ; ನಿರ್ದಾಕ್ಷಿಣ್ಯವಾದ: flat denial ನಿರ್ದಾಕ್ಷಿಣ್ಯ ನಿರಾಕರಣೆ. flat nonsense ಶುದ್ಧ ಅಸಂಬದ್ಧ. that is flat ಆ ವಿಷಯದಲ್ಲೇನೂ ಸಂಶಯ ಬೇಡ; ಅದು ಖಂಡಿತ.
  8. ಜಡ; ನಿರ್ಜೀವ; ಪೇಲವ; ಏಕತಾನದ; ಒಂದೇ ರಾಗದ; ಬೇಸರ ಬರುವಂಥ.
  9. ಮಂದಿ(ಯಾದ); (ಮಾರುಕಟ್ಟೆ, ಬೆಲೆ, ಮೊದಲಾದವು) ಕುಸಿದ: prices are flat ಬೆಲೆಗಳು ಮಂದಿಯಾಗಿವೆ.
  10. ಮಂದಬುದ್ಧಿಯ: empty, slow flat people ನೀರಸ, ನಿಧಾನ, ಮಂದಬುದ್ಧಿಯ – ಜನ.
  11. ಖಿನ್ನ; ಗೆಲವಿಲ್ಲದ.
  12. ಶಕ್ತಿಗುಂದಿದ; ನಿಸ್ಸಾರ; ನೀರಸ; ಸಪ್ಪೆ; ಬಲವಿಲ್ಲದ.
  13. (ಮದ್ಯದ ವಿಷಯದಲ್ಲಿ) ನೊರೆಯಡಗಿದ: flat beer ನೊರೆಯಡಗಿದ, ಸಪ್ಪೆ – ಬಿಯರು.
  14. (ಸಂಗೀತ) ಅರ್ಧಮಂದ್ರ; ನೈಜಸ್ವರಕ್ಕೆ ಅರ್ಧ ಕೆಳಗಿನ ಕಡಮೆ ಮಟ್ಟದ: B, E flat ಬಿ, ಇ ಸ್ವರಗಳಿಗೆ ಅರ್ಧಸ್ವರ ಕೆಳಗಿನ.
  15. (ಟೈರು ಮೊದಲಾದವು) ಗಾಳಿಯಿಲ್ಲದೆ ಚಪ್ಪಟೆಯಾದ.
  16. (ಹಣದ) ಮುಗ್ಗಟ್ಟಿನ; ಹಣವಿಲ್ಲದ ಸ್ಥಿತಿಯ.
  17. (ಬಣ್ಣ, ವಾರ್ನಿಷ್‍, ಮೊದಲಾದವುಗಳ ವಿಷಯದಲ್ಲಿ) ಹೊಳಪಿಲ್ಲದ; ಮಂಕಾದ; ನಿಸ್ತೇಜ.
  18. (ಛಾಯಾಚಿತ್ರಣ) ಕಾಂತಿಭೇದ ತೋರದ, ಇಲ್ಲದ.
  19. (ವಿದ್ಯುತ್ಸಂಗ್ರಾಹಕ ಮೊದಲಾದವುಗಳ ವಿಷಯದಲ್ಲಿ) ಮತ್ತೆ ವಿದ್ಯುತ್ತನ್ನು ತುಂಬದೆ ವಿದ್ಯುತ್ತು – ಮುಗಿದುಹೋದ, ಖಾಲಿಯಾದ.
  20. (ಚಿತ್ರಕಲೆ)
    1. ಚಪ್ಪಟೆ; ಗಾತ್ರ, ದೂರ, ಯಾ ಆಳದ ಭಾವ ಯಾ ಪರಿಣಾಮ – ಇಲ್ಲದ, ಉಂಟುಮಾಡದ.
    2. ಏಕರೂಪದ; ಬಣ್ಣದ ಯಾ ಛಾಯೆಯ ವ್ಯತ್ಯಾಸಗಳಿಲ್ಲದ.
    3. ನಿಸ್ತೇಜ; ಉಜ್ಜ್ವಲವಾಗಿರದ; ಹೊಳಪಿಲ್ಲದ.
ಪದಗುಚ್ಛ
  1. flat aback (ನೌಕಾಯಾನ, ರೂಪಕವಾಗಿ) ಸಂಪೂರ್ಣ ಹಿಂದಕ್ಕೆ.
  2. flat candlestick ಚಪ್ಪಟೆಮೋಂಬತ್ತಿ (ಹಿಡಿದುಕೊಂಡು ಹೋಗಲು ಅನುಕೂಲವಾದ) ಅಗಲ ತಳದ, ಗಿಡ್ಡಕಾಂಡದ, ಮೇಣದ ಬತ್ತಿ.
ನುಡಿಗಟ್ಟು
  1. fall flat (ಉದ್ದಿಷ್ಟ ಪರಿಣಾಮ ಉಂಟುಮಾಡದೆ) ಅಯಶಸ್ವಿಯಾಗು; ಮೆಚ್ಚಿಗೆ ಗಳಿಸದೆ ಹೋಗು; ನೀರಸವಾಗು; ಸಪ್ಪೆಯಾಗು.
  2. flat on one’s back ಕಾಯಿಲೆಯಿಂದ ಹಾಸಿಗೆ ಹಿಡಿದು ಮಲಗು.
  3. that’s flat ಅದು ಖಾತರಿ; ಅದರ ಬಗ್ಗೆ ಯಾವ ಸಂಶಯವೂ ಬೇಡ.
See also 1flat  2flat  4flat  5flat
3flat ಹ್ಲಾಟ್‍
ನಾಮವಾಚಕ
  1. ಚಪ್ಪಟೆಯಾಗಿರುವುದು; ತಟ್ಟೆಯಂತಿರುವುದು; ಸಪಾಟಾಗಿರುವುದು; ಸಮತಲವಾಗಿರುವುದು.
  2. (ಯಾವುದೋ ಒಂದರ) ಚಪ್ಪಟೆಯ ಭಾಗ: the flat of the hand ಅಂಗೈ. with the flat of his sword ತನ್ನ ಕತ್ತಿಯ ಚಪ್ಪಟೆಭಾಗದಿಂದ.
    1. ಮಟ್ಟನೆಲ; ಸಮನೆಲ; ಬಯಲು; ಮೈದಾನ.
    2. ತಗ್ಗುಭೂಮಿ.
    3. ಜವುಗು ಪ್ರದೇಶ.
  3. ಚಪ್ಪಟೆತಳದ ದೋಣಿ.
  4. ಆಳವಿಲ್ಲದ ಕುಕ್ಕೆ, ಬುಟ್ಟಿ.
  5. (ರಂಗಭೂಮಿ) ಚಲಿಸುವ ಚೌಕಟ್ಟಿನ ಮೇಲೆ ಅಳವಡಿಸಿರುವ, ಜೋಡಿಸಿರುವ – ದೃಶ್ಯ, ಪರದೆ.
  6. (ಅಶಿಷ್ಟ) ದಡ್ಡ; ಮೊದ್ದ; ಮುಟ್ಠಾಳ; ಗುಗ್ಗು; ಮಂಕು(ಬುದ್ಧಿ); ಬೆಪ್ಪುತಕ್ಕಡಿ; ಸುಲಭವಾಗಿ ಮೋಸ ಹೋಗುವವನು.
  7. (ಸಂಗೀತ) ಅರ್ಧ ಮಂದ್ರಸ್ವರ; ನೈಜಸ್ವರದಲ್ಲಿ ಅರ್ಧಸ್ವರ ಇಳಿಸಿದ ಸ್ವರ.
  8. (ಸಂಗೀತ) ಅರ್ಧಮಂದ್ರಸ್ವರದ ಅರ್ಧಇಳಿತದ – ಚಿಹ್ನೆ.
  9. ಚಪ್ಪಟೆ ಪುಸ್ತಕ; ಅಗಲವಾದ, ತೆಳುವಾದ ಮಕ್ಕಳ ಪುಸ್ತಕ: a juvenile flat ಮಕ್ಕಳ ಚಪ್ಪಟೆ ಪುಸ್ತಕ.
  10. (ಮುಖ್ಯವಾಗಿ ತೂತು ಬಿದ್ದು) ಗಾಳಿ ಹೋದ ಟೈರು; ಖಾಲಿ ಟೈರು.
  11. (ಕುದುರೆಗಳ) ಸಮತಟ್ಟಿನ ರೇಸಿನ ಕಾಲ; ಅಡೆತಡೆಗಳಿಲ್ಲದ, ಮಟ್ಟಸಭೂಮಿಯ ಮೇಲೆ ಓಡುವ ಪಂದ್ಯದ ಕಾಲ.
ಪದಗುಚ್ಛ
  1. join the flats
    1. ಸಮರಸಗೊಳಿಸು; ಸಮರಸಭಾವ ಇರುವಂತೆ ಮಾಡು, ತೋರುವಂತೆ ಮಾಡು.
    2. ಸಂಘಟಿಸು; ಒಂದು ವಸ್ತುವನ್ನು ಒಂದುಗೂಡುವಂತೆ, ಅಖಂಡವಾಗಿರುವಂತೆ – ಮಾಡು, ಜೋಡಿಸು, ಸಂಯೋಜಿಸು.
  2. on, from the flat (ರೇಖನ ಮೊದಲಾದವುಗಳ ವಿಷಯವಾಗಿ ಕೆತ್ತನೆ ಕೆಲಸದಲ್ಲಿರುವಂತೆ ಆಗಿರದೆ) ಸಮತಲದಲ್ಲಿ.
  3. sharps and flats ಪಿಯಾನೋ ವಾದ್ಯದಲ್ಲಿ ಕಪ್ಪು ಬಣ್ಣದ ಕೀಲಿ ಕೈಗಳಿರುವ ಸ್ವರಗಳು.
See also 1flat  2flat  3flat  5flat
4flat ಹ್ಲಾಟ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಕಾರ್ಖಾನೆಯಲ್ಲಿ ವಸ್ತುಗಳನ್ನು ತಯಾರಿಸುವಾಗ) ಚಪ್ಪಟೆ ಮಾಡು; ಚಪ್ಪಟೆಗೊಳಿಸು.

See also 1flat  2flat  3flat  4flat
5flat ಹ್ಲಾಟ್‍
ಕ್ರಿಯಾವಿಶೇಷಣ
  1. ಚಪ್ಪಟೆಯಾಗಿ; ಸಮತಲವಾಗಿ: lies flat ಸಮತಲವಾಗಿ ಬಿದ್ದಿದೆ.
  2. (ಸಂಗೀತ) ಅರ್ಧಮಂದ್ರದಲ್ಲಿ; ಕೆಳಗಿನ ಸ್ವರದಲ್ಲಿ; sings flat ಅರ್ಧಮಂದ್ರದಲ್ಲಿ ಹಾಡುತ್ತಾನೆ; ಮಟ್ಟಸ್ವರದಲ್ಲಿ ಹಾಡುತ್ತಾನೆ.
  3. ನೇರವಾಗಿ; ನೆಟ್ಟಗೆ; ಇದ್ದದ್ದು ಇದ್ದ ಹಾಗೆ: turned it down flat ಅದನ್ನು ನೇರವಾಗಿ ತಿರಸ್ಕರಿಸಿದ. came out flat for less work and higher pay ಕಡಮೆ ಕೆಲಸ ಹೆಚ್ಚು ಸಂಬಳ ಅಗತ್ಯವೆಂದು ಇದ್ದದ್ದು ಇದ್ದ ಹಾಗೆ ಹೇಳಿದ.
  4. ನೆಲಸಮವಾಗಿ: fell flat ನೆಲಸಮವಾಗಿ ಬಿದ್ದ.
  5. (ಆಡುಮಾತು) ಪೂರ್ತಿಯಾಗಿ; ಸಂಪೂರ್ಣವಾಗಿ: flat broke ಸಂಪೂರ್ಣವಾಗಿ ಮುರಿದು ಹೋಯಿತು.
  6. ಸರಿಯಾಗಿ ಯಾ ಈರದೆ: ten seconds flat ಸರಿಯಾಗಿ ಹತ್ತು ಸೆಕೆಂಡುಗಳು; ಹತ್ತು ಸೆಕೆಂಡುಗಳಿಗೆ ಈರದೆ.
ನುಡಿಗಟ್ಟು

flat out

  1. ತನ್ನೆಲ್ಲ ಶಕ್ತಿಸಾಮರ್ಥ್ಯಗಳನ್ನೂ ಬಳಸಿ; ಅತ್ಯಂತ ವೇಗವಾಗಿ.
  2. ಬಳಲಿ; ಆಯಾಸಗೊಂಡು; ಸುಸ್ತಾಗಿ.