flapper ಹ್ಲಾಪರ್‍
ನಾಮವಾಚಕ
  1. ನೊಣ ಬಡಿಯಲು ಬಳಸುವ ಚಪ್ಪಟೆಯ ಸಲಕರಣೆ.
  2. (ಹಕ್ಕಿಗಳನ್ನು ಬೆದರಿಸಿ ಓಡಿಸುವ) ಬಡಿಬಡಿ; ಗಲಗಲಿ.
  3. ಕಾಡುಬಾತಿನ ಯಾ ತಿತ್ತಿರಿ ಪಕ್ಷಿಯ ಮರಿ.
  4. (ಪ್ರಾಚೀನ ಪ್ರಯೋಗ, ಅಶಿಷ್ಟ) (ತಲೆಗೂದಲನ್ನು ಉದ್ದವಾಗಿ ಬಿಟ್ಟುಕೊಂಡಿರುವ. 17 ರಿಂದ 20 ವರ್ಷಕ್ಕೊಳಪಟ್ಟ, ಮುಖ್ಯವಾಗಿ ಸಂಪ್ರದಾಯಬದ್ಧಳಲ್ಲದ) ನವತರುಣಿ.
  5. ಜೋಲುಮುಚ್ಚಳ; ಕೀಲಿನಿಂದ ತಗುಲಿಸಿದ ಯಾ ಜೋಲುಬಿಟ್ಟಿರುವ ಮುಚ್ಚಳ.
  6. (ಈನಿನ) ಅಗಲವಾದ ಈಜುರೆಕ್ಕೆ.
  7. ವಲ್ಕವಂತ ಪ್ರಾಣಿಯ ಬಾಲ.
  8. (ಅಶಿಷ್ಟ) ಕೈ.