See also 2flap
1flap ಹ್ಲಾಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ flapped, ವರ್ತಮಾನ ಕೃದಂತ flapping).
  1. (ಅಗಲವಾದ ಯಾವುದೇ ವಸ್ತುವಿನಿಂದ) ಹೊಡೆ; ಬಡಿ.
  2. ನೊಣ ಮೊದಲಾದವುಗಳನ್ನು ಓಡಿಸು.
  3. (ಪಕ್ಷಿಗಳ ವಿಷಯದಲ್ಲಿ) ಹೊಡೆ; ಬಡಿ; ರೆಕ್ಕೆಗಳನ್ನು ಮೇಲಕ್ಕೂ ಕೆಳಕ್ಕೂ ಆಡಿಸು.
ಅಕರ್ಮಕ ಕ್ರಿಯಾಪದ
  1. ಜೋಲಾಡು ಯಾ ತೂಗಾಡು.
  2. ಪಟಪಟ (ರೆಕ್ಕೆ) ಬಡಿ, ಒದರು.
  3. ಹಿಂದಕ್ಕೂ ಮುಂದಕ್ಕೂ ಓಲಾಡು.
  4. (ರೆಕ್ಕೆಗಳ ವಿಷಯದಲ್ಲಿ) ಬಡಿ; ಮೇಲಕ್ಕೂ ಕೆಳಕ್ಕೂ ಆಡು.
  5. (ಆಡುಮಾತು) (ಕಿವಿಗಳ ವಿಷಯದಲ್ಲಿ) ಗಮನವಿಟ್ಟು ಕೇಳುತ್ತಿರು.
  6. (ಆಡುಮಾತು) ಬೆದರು; ಹೆದರು; ಕ್ಷೋಭೆಗೊಳ್ಳು ಯಾ ಗಾಬರಿ ಬೀಳು.
See also 1flap
2flap ಹ್ಲಾಪ್‍
ನಾಮವಾಚಕ
  1. (ಅಗಲವಾದ ವಸ್ತುವಿನಿಂದ ಕೊಟ್ಟ) ಹಗುರ – ಏಟು, ಪೆಟ್ಟು.
  2. (ರೆಕ್ಕೆ ಮೊದಲಾದವುಗಳ) ಬಡಿತ; ಮೇಲಕ್ಕೂ ಕೆಳಕ್ಕೂ ಚಲನ.
  3. (ಆಡುಮಾತು) ಉದ್ವೇಗ; ಕೆರಳಿದ ಸ್ಥಿತಿ: get into a flap ಕೆರಳು; ಉದ್ವೇಗಗೊಳ್ಳು.
  4. ಬೀಳುಮುಚ್ಚಳ; ಮುಚ್ಚಲು ಆಗುವಂತೆ ಒಂದು ಕಡೆ ಕೀಲಿನಿಂದ ತಗುಲಿಸಿರುವ, ಅಗಲವಾದ, ಚಪ್ಪಟೆಯ ಮುಚ್ಚಳ(ಉದಾಹರಣೆಗೆ ಬೋನಿನ ಕದ, ಜೇಬಿನ ಮುಚ್ಚಳ, ಹ್ಯಾಟಿನ ಅಂಚು, ಮೇಜಿನ ಮಡಿಚುಹಲಗೆ, ಕವಾಟ, ಈನಿನ ಕಿವುರಿನ ಮುಚ್ಚಳ, ಅಂಗವಿಚ್ಛೇದನ ಕ್ರಿಯೆಯ ನಂತರ ಬಿಟ್ಟಿರುವ ಚರ್ಮದ ತುಂಡು).
  5. ನಾಯಿಕೊಡೆ ಟೋಪಿ; ಅಣಬೆ ಟೋಪಿ; ಅರಳಿರುವ ನಾಯಿಕೊಡೆಯ ತಲೆಯ ಮೇಲ್ಭಾಗ.
  6. = aileron
  7. ನಿಯಂತ್ರಕ – ಕದ, ಕವಾಟ; ಲಿಫ್ಟನ್ನು ನಿಯಂತ್ರಿಲು ತಿರುಗಣಿಯಿಂದ ಕೂಡಿಸಿದ ಯಾ ಜಾರುವಂತೆ ಅಳವಡಿಸಿದ ಭಾಗ.