See also 2flannel  3flannel
1flannel ಹ್ಲಾನ್‍(ನ)ಲ್‍
ನಾಮವಾಚಕ
  1. ಹ್ಲ್ಯಾನಲು; (ಸಾಮಾನ್ಯವಾಗಿ ಚುಂಗು ಇಲ್ಲದ) ನೆಯ್ದ ಉಣ್ಣೆಬಟ್ಟೆ.
  2. (ಬಹುವಚನದಲ್ಲಿ) ಹ್ಲ್ಯಾನಲ್‍ಗಳು:
    1. ಬಗೆಬಗೆಯ ಹ್ಲ್ಯಾನಲ್‍ಗಳು.
    2. ಉಣ್ಣೆಯ ಸರಕುಗಳು.
    3. ಹ್ಲ್ಯಾನಲ್‍ನಿಂದ ಹೊಲಿದ ಒಳಉಡುಪು.
    4. ಹ್ಲ್ಯಾನಲ್‍ನ ಬ್ಯಾಂಡೇಜುಗಳು.
    5. ಹ್ಲ್ಯಾನಲ್‍ ಉಡುಪುಗಳು, ಮುಖ್ಯವಾಗಿ ಹ್ಲ್ಯಾನಲ್‍ ಷರಾಯಿ.
  3. ಒರೆಸುವ ಬಟ್ಟೆ; ಸಾರಿಸುವ ಬಟ್ಟೆ; ಕೈ, ಮುಖ, ಮೊದಲಾದವುಗಳನ್ನು ಒರೆಸುವುದಕ್ಕಾಗಿ ಯಾ ನೆಲವನ್ನು ಸಾರಿಸಲು ಬಳಸುವ ಹ್ಲ್ಯಾನಲ್‍ ಯಾ ಇತರ ಬಗೆಯ ಬಟ್ಟೆ.
  4. (ಅಶಿಷ್ಟ) ಅಸಂಬದ್ಧವಾದದ್ದು.
  5. (ಅಶಿಷ್ಟ) ಜಂಬದ ಮಾತು; ಬಡಾಯಿ.
  6. (ಅಶಿಷ್ಟ) ಮುಖಸ್ತುತಿ; ಹುಸಿಹೊಗಳಿಕೆ.
See also 1flannel  3flannel
2flannel ಹ್ಲಾನ್‍(ನ)ಲ್‍
ಸಕರ್ಮಕ ಕ್ರಿಯಾಪದ

( ಅಕರ್ಮಕ ಕ್ರಿಯಾಪದ ಸಹ)

  1. ಒರೆಸಲು ಯಾ ಸ್ವಚ್ಛಗೊಳಿಸಲು ಹ್ಲ್ಯಾನಲ್‍ ಬಟ್ಟೆ ಬಳಸು: children were soaped and flanneled ಮಕ್ಕಳನ್ನು ಸೋಪಿನಿಂದ ತೊಳೆದು ಹ್ಲಾನಲಿನಿಂದ ಒರೆಸಿದರು.
  2. ಹ್ಲಾನಲನ್ನು ಹೊದಿಸು ಯಾ ತೊಡಿಸು.
  3. (ಅಶಿಷ್ಟ) ಮುಖಸ್ತುತಿಮಾಡು; ಹೊಗಳು; ಒಬ್ಬನನ್ನು ಅನುಸರಿಸಿ, ಹೊಗಳಿ ಅವನ ದಯೆ ಸಂಪಾದಿಸಲು ಯತ್ನಿಸು.
See also 1flannel  2flannel
3flannel ಹ್ಲಾನ್‍(ನ)ಲ್‍
ಗುಣವಾಚಕ

ಹ್ಲ್ಯಾನಲ್‍ನಿಂದ ಮಾಡಿದ; ಹ್ಲ್ಯಾನಲಿನ: a flannel petticoat ಹ್ಲ್ಯಾನಲ್‍ ಒಳಪಾವಡೆ.