See also 2flank
1flank ಹ್ಲಾಂಕ್‍
ನಾಮವಾಚಕ
  1. ಪಕ್ಕೆ; ಅಳ್ಳೆ; ಪಕ್ಕೆಲುಬುಗಳಿಗೂ ಸೊಂಟಕ್ಕೂ ನಡುವೆ ಇರುವ ಪಕ್ಕೆಯ ಮಾಂಸದ ಭಾಗ.
  2. (ಕಟ್ಟಡ, ಬೆಟ್ಟ, ಮೊದಲಾದವುಗಳ) ಪಕ್ಕ; ಮಗ್ಗುಲು; ಪಾರ್ಶ್ವ.
  3. (ಸೈನ್ಯ ಯಾ ಅಂತಹ ಸಮೂಹದ ಎಡ ಯಾ ಬಲ) ಪಕ್ಕ; ಪಾರ್ಶ್ವ ಬದಿ: in flank ಪಕ್ಕದಲ್ಲಿ; (ಎಡ ಯಾ ಬಲ)ಬದಿಯಲ್ಲಿ.
ನುಡಿಗಟ್ಟು

turn flank of ಸೈನ್ಯವನ್ನು ಪಕ್ಕದಿಂದ ಆಕ್ರಮಿಸು.

See also 1flank
2flank ಹ್ಲಾಂಕ್‍
ಸಕರ್ಮಕ ಕ್ರಿಯಾಪದ
  1. ಪಕ್ಕವನ್ನು ಕಾಪಿಡು; ಮಗ್ಗುಲನ್ನು ಬಲಪಡಿಸು; ಪಾರ್ಶ್ವರಕ್ಷಣೆ ಮಾಡು.
  2. (ಶತ್ರುಸೈನ್ಯದ) ಪಕ್ಕದ ಮೇಲೆ ಬೀಳು; ಪಾರ್ಶ್ವದಾಳಿಮಾಡು; ಪಕ್ಕದ ಮೇಲೆ ಎರಗು; ಆಕ್ರಮಣ ಮಾಡು; ಪಾರ್ಶ್ವಾಕ್ರಮಣ ಮಾಡು.
  3. (ಶತ್ರುಸೈನ್ಯವನ್ನು) ಪಕ್ಕದಿಂದ ಮುತ್ತು ಯಾ ವಶಪಡಿಸಿಕೊ.
  4. (ಶತ್ರುಸೈನ್ಯದ) ಸಾಲಿನ ಉದ್ದಕ್ಕೂ ಗುಂಡಿನ ಮಳೆಗರೆ.
  5. (ಶತ್ರುಸೈನ್ಯವನ್ನು) ಪಕ್ಕದಲ್ಲಿ ಬಳಸಿಕೊಂಡು ಹೋಗು.
  6. (ಕರ್ಮಣಿಪ್ರಯೋಗದಲ್ಲಿ) ಪಕ್ಕದಲ್ಲಿ ನಿಯುಕ್ತನಾಗಿರು ಯಾ ಪಕ್ಕವನ್ನು ಆಕ್ರಮಿಸಿರು.
  7. (ಧ್ವಜ ಮೊದಲಾದವನ್ನು) ಸಮಗತಿಯಲ್ಲಿ ಸೈನಿಕ ಶಿಸ್ತಿನಿಂದ ಹಾದುಹೋಗು.
  8. (ಶತ್ರುಸೈನ್ಯದ ಪಕ್ಕದಿಂದ ಮುಂದೆ ಹೋಗಿ ಅದನ್ನು) ಸುತ್ತುವರಿ; ಮುತ್ತು.