flaming ಹ್ಲೇಮಿಂಗ್‍
ಗುಣವಾಚಕ
  1. ಉರಿಯುತ್ತಿರುವ; ಜ್ವಲಿಸುತ್ತಿರುವ; ಜ್ವಲಂತ.
  2. (ಉತ್ಕಟವಾದ ಯಾವುದೇ ಭಾವದ ವಿಷಯದಲ್ಲಿ) ಕೆರಳಿರುವ; ಪ್ರಜ್ವಲಿಸುವ.
  3. (ಮನುಷ್ಯರ ವಿಷಯದಲ್ಲಿ) ಕೋಪೋದ್ರಿಕ್ತ; ಸಿಟ್ಟೆದ್ದು ಉರಿದುಬೀಳುತ್ತಿರುವ; ಕ್ರೋಧಾವಿಷ್ಟ; ಕ್ರೋಧದಿಂದ ಉರಿಯುತ್ತಿರುವ.
  4. ಹೊಳೆಯುವ; ಬೆಳಗುವ; ತೊಳಗುವ ; ಪ್ರಕಾಶಿಸುವ; ಜ್ವಲಂತ; ಜ್ವಲಿಸುವ.
  5. ವಿಪರೀತ ಸುಡುತ್ತಿರುವ; ಧಗಧಗಿಸುವ; ಉರಿಯುವ: a flaming sun ಧಗಧಗಿಸುವ ಸೂರ್ಯ ಯಾ ಬಿಸಿಲು.
  6. ಉಜ್ಜ್ವಲ ವರ್ಣದ.
  7. (ಪ್ರಾಚೀನ ಪ್ರಯೋಗ) ಉತ್ಪ್ರೇಕ್ಷಿತ; ಅತಿಶಯೋಕ್ತಿಯ; ಮಿತಿಈರಿದ ಹೊಗಳಿಕೆಯ: a flaming description ಉತ್ಪ್ರೇಕ್ಷಿತ ವರ್ಣನೆ; ಅತಿಯಾಗಿ ಬಣ್ಣಹಚ್ಚಿದ ವರ್ಣನೆ.
  8. (ಆಡುಮಾತು) ತೀವ್ರ; ಭಾವೊದ್ರೇಕದಿಂದ ಕೂಡಿದ: a flaming row ತೀವ್ರ – ವ್ಯಾಜ್ಯ, ಜಗಳ.
  9. (ಆಡುಮಾತು) ಹಾಳು; ಅನಿಷ್ಟ; ದರಿದ್ರ: that flaming dog ಆ ಹಾಳುನಾಯಿ.
ಪದಗುಚ್ಛ

flaming onions (ಉರಿಯುವ ಗುಂಡುಗಳ ಸಾಲಿನಂತೆ ಕಾಣುವ) ವಿಮಾನ ವಿಧ್ವಂಸಕ ಕ್ಷಿಪಣಿ.