See also 2flag  3flag  4flag  5flag  6flag  7flag
1flag ಹ್ಲಾಗ್‍
ನಾಮವಾಚಕ
  1. ಬಾವುಟದ ಗಿಡ; ಪತಾಕೆ ಗಿಡ; ತೇವದ ಭೂಮಿಯಲ್ಲಿ ಬೆಳೆಯುವ ಗರಿಯಂಥ ಎಲೆಯುಳ್ಳ ಹಲವು ಬಗೆಯ ಗಿಡಗಳು, ಮುಖ್ಯವಾಗಿ ‘ಐರಿಸ್‍’ ಗಿಡದ ವಿವಿಧ ಜಾತಿಗಳು.
  2. (ಬಹುವಚನ ಸಹ) (ಸಮೂಹವಾಚಕ) ವಿವಿಧ ಬಗೆಯ ಒರಟು ಹುಲ್ಲು.
  3. (ಸಸ್ಯದ ಉದ್ದವಾದ, ತೆಳುವಾದ) ಎಸಳು; ಎಲೆ; ಗರಿ.
See also 1flag  3flag  4flag  5flag  6flag  7flag
2flag ಹ್ಲಾಗ್‍
ನಾಮವಾಚಕ
  1. ಹಾಸುಗಲ್ಲು; ಕಲ್ಲು ಚಪ್ಪಡಿ; ನೆಲಕ್ಕೆ ಹಾಸುವ ಕಲ್ಲು ಚಪ್ಪಡಿ.
  2. (ಬಹುವಚನದಲ್ಲಿ) ಚಪ್ಪಡಿನೆಲ; ಚಪ್ಪಡಿ ಹಾಸಿದ ನೆಲಗಟ್ಟು.
See also 1flag  2flag  4flag  5flag  6flag  7flag
3flag ಹ್ಲಾಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ flagged, ವರ್ತಮಾನ ಕೃದಂತ flagging).

ನೆಲಕ್ಕೆ ಚಪ್ಪಡಿ ಹಾಸು.

See also 1flag  2flag  3flag  5flag  6flag  7flag
4flag ಹ್ಲಾಗ್‍
ನಾಮವಾಚಕ

ಹಕ್ಕಿಯ ರೆಕ್ಕೆಯ ದೊಡ್ಡ ಗರಿ.

See also 1flag  2flag  3flag  4flag  6flag  7flag
5flag ಹ್ಲಾಗ್‍
ನಾಮವಾಚಕ
  1. ಬಾವುಟ; ಧ್ವಜ; ಪತಾಕೆ; ನಿಶಾನಿ; ಝಾಂಡ; ಕೇತನ; ಕೇತು; ಗುಡಿ.
  2. (ನೌಕಾಯಾನ) (ನೌಕಾಬಲಾಧಿಪತಿಯ ಅಂತಸ್ತಿನ ಸಂಕೇತವಾಗಿ, ಆ ಅಧಿಕಾರಿಯಿರುವ ಪ್ರಯಾಣದ ಹಡಗಿನ ಮೇಲೆ ಹಾರಿಸುವ) ನೌಕಾಧಿಕಾರದ ಬಾವುಟ.
  3. ಬಾಡಿಗೆಗೆ ಎಂದು ಬರೆದು ಟ್ಯಾಕ್ಸಿ ಯಾ ಈಟರಿಗೆ ಸಿಕ್ಕಿಸಿರುವ, ಲೋಹ ಮೊದಲಾದವುಗಳ ಫಲಕ, ಹಲಗೆ.
  4. ಪತಾಕೆ; ಗಮನ ಸೆಳೆಯಲು ಯಾ ಗುರುತಿಗಾಗಿ ಹಾಕುವ (ಬಣ್ಣದ) ಕಾಗದ ಮೊದಲಾದವುಗಳ ತುಂಡು.
ಪದಗುಚ್ಛ
  1. black flag
    1. (ಕಡಲುಗಳ್ಳನ ಹಡಗಿನ ಲಾಂಛನವಾದ) ಕರಿಯ ಬಾವುಟ; ಕಪ್ಪುನಿಶಾನಿ.
    2. (ಅಪರಾಧಿಯನ್ನು ಗಲ್ಲಿಗೇರಿಸಿದೆಯೆಂದು ಪ್ರಕಟಪಡಿಸಲು ಸೆರಮನೆಯ ಹೊರಗೆ ಹಾರಿಸುವ) ಬಾವುಟ.
  2. dip flag (ಗೌರವಾರ್ಥವಾಗಿ, ಕ್ಷಣಕಾಲ) ಬಾವುಟ ಬಾಗಿಸು; ಧ್ವಜ ತಗ್ಗಿಸು.
  3. flag of convenience ಅನುಕೂಲ ಬಾವುಟ; ಸ್ವದೇಶದಲ್ಲಿ ತೆರಿಗೆ ಮೊದಲಾದವನ್ನು ತಪ್ಪಿಸಿಕೊಳ್ಳಲು, ವಿದೇಶೀನೌಕೆಯೆಂದು ದಾಖಲು ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ಹಾರಿಸುವ ಧ್ವಜ.
  4. flag of truce ಸಂಧಾನ (ಸೂಚಕ ಬಿಳಿಯ) ಬಾವುಟ.
  5. red flag ಕೆಂಪು ಬಾವುಟ:
    1. ಕ್ರಾಂತಿಯ ಚಿಹ್ನೆ.
    2. ಗುಂಡು ಹಾರಿಸುವ ಪ್ರದೇಶ, ರೈಲುಮಾರ್ಗ, ಮೊದಲಾದವುಗಳಲ್ಲಿ ಅಪಾಯ ಸೂಚಿಸಲು ನೆಡುವ ಕೆಂಪು ಬಾವುಟ.
  6. white flag (ಹಗೆತನವಿಲ್ಲವೆಂದು ಸೂಚಿಸುವ) ಬಿಳಿಯ ನಿಶಾನಿ; ಶ್ವೇತಧ್ವಜ; ಶಾಂತಿ ಬಾವುಟ; ಸಂಧಿಪತಾಕೆ.
  7. yellow flag (ಹಡಗಿನಲ್ಲಿ ಸೋಂಕು ರೋಗವಿದೆಯೆಂದಾಗಲಿ, ಆಸ್ಪತ್ರೆಯ ಹಡಗೆಂದಾಗಲಿ, ಸೋಂಕುರೋಗ ಹರಡದಿರಲೆಂದು ಹಡಗು ಸಂಪರ್ಕ ನಿಷೇಧ ಸೂಚಿಸುವ) ಹಳದಿ ಬಾವುಟ; ಪೀತಧ್ವಜ.
ನುಡಿಗಟ್ಟು
  1. hoist one’s flag (ನೌಕೆಯ) ಆಧಿಪತ್ಯ ವಹಿಸಿಕೊ; ಅಧಿಕಾರ ಸ್ವೀಕರಿಸುವ ಚಿಹ್ನೆಯಾಗಿ ಬಾವುಟ ಹಾರಿಸು.
  2. hoist the flag (ಹೊಸದಾಗಿ ಕಂಡುಹಿಡಿದ ಪ್ರದೇಶಕ್ಕೆ ಹಕ್ಕು ಸ್ಥಾಪಿಸಲು) ಬಾವುಟ ಹಾರಿಸು; ಧ್ವಜಏರಿಸು.
  3. keep the flag flying (ಸಾಮಾನ್ಯವಾಗಿ ರೂಪಕವಾಗಿ) (ಶರಣಾಗದೆ) ಹೋರಾಟವನ್ನು ಮುಂದುವರಿಸು.
  4. lower one’s flag (ವಂದನೆ, ಗೌರವ ತೋರಿಸಲು ಯಾ ಶರಣಾಗತಿ ಸೂಚಿಸಲು) ಬಾವುಟ ತಗ್ಗಿಸು ಯಾ ಧ್ವಜ ಇಳಿಸು.
  5. put the flag out ಗೆಲವು ಮೊದಲಾದವನ್ನು ಆಚರಿಸು.
  6. show that flag
    1. (ಬಿಳಿ ಬಾವುಟವನ್ನು ತೋರಿಸಿ) ವಿದೇಶೀ ಬಂದರು ಮೊದಲಾದವುಗಳಿಗೆ ಅಧಿಕೃತವಾಗಿ ಹೋಗು; ಭೇಟಿಕೊಡು.
    2. ತನಗೆ, ತನ್ನ ದೇಶ ಮೊದಲಾದವುಗಳಿಗೆ ಸಲ್ಲಬೇಕಾದ ಗೌರವ ದೊರೆಯುವಂತೆ ಮಾಡಿಕೊ.
  7. strike one’s flag
    1. = ನುಡಿಗಟ್ಟು \((4)\).
    2. ಆಧಿಪತ್ಯ ಬಿಟ್ಟು ಕೊಡು; ಅಧಿಕಾರ ತ್ಯಜಿಸುವ ಚಿಹ್ನೆಯಾಗಿ ಬಾವುಟ ಇಳಿಸು.
See also 1flag  2flag  3flag  4flag  5flag  7flag
6flag ಹ್ಲಾಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ flagged, ವರ್ತಮಾನ ಕೃದಂತ flagging).
  1. ಬಾವುಟ–ಹಾಕು, ಸಿಕ್ಕು, ಸಿಕ್ಕಿಸು; ಬಾವುಟಬಿಡು: the course will be flagged at regular intervals ಮಾರ್ಗದುದ್ದಕ್ಕೂ ಕ್ರಮವಾಗಿ ಸ್ವಲ್ಪಸ್ವಲ್ಪ ದೂರಕ್ಕೆ ಬಾವುಟ ಹಾಕಲಾಗುವುದು.
  2. ಬಾವುಟದಂತಹ ಪಟ್ಟಿಗಳಿಂದ ಗುರುತುಮಾಡು: he flagged the important pages with red tapes ಅವನು ಮುಖ್ಯಪುಟಗಳನ್ನು ಕೆಂಪುಪಟ್ಟಿಗಳಿಂದ ಗುರುತುಮಾಡಿದನು.
  3. ಬಾವುಟಾಲಂಕಾರ, ಧ್ವಜಾಲಂಕಾರ – ಮಾಡು; ಬಾವುಟ, ನಿಶಾನಿ ಕಟ್ಟು; ಬಾವುಟಗಳಿಂದ ಅಲಂಕರಿಸು: the streets flagged to celebrate a victory ವಿಜಯವನ್ನು ಸಂಭ್ರಮದಿಂದ ಆಚರಿಸಲು ಬಾವುಟಗಳಿಂದ ಅಲಂಕೃತವಾದ ರಸ್ತೆಗಳು.
  4. ಬಾವುಟದ (ಸಂಕೇತಗಳ) ಮೂಲಕ (ವ್ಯಕ್ತಿಗೆ) ಸಮಾಚಾರ ತಿಳಿಸು.
  5. ಬಾವುಟಗಳ (ಸಂಕೇತಗಳ) ಮೂಲಕ (ಸಮಾಚಾರ) ಕೊಡು, (ಸುದ್ದಿ) ಕಳಿಸು: flagging his orders to the other ships ಅವನ ಆಜ್ಞೆಗಳನ್ನು ಇತರ ಹಡಗುಗಳಿಗೆ ಕಳಿಸಿ ಕೊಡುತ್ತಾ.
  6. (ಬಾವುಟದಿಂದ ಮಾಡುವ ಯಾ ಬಾವುಟದಿಂದ ಮಾಡುವಂತೆ) ಮುಖ್ಯವಾಗಿ(ವಾಹನಕ್ಕೆ ಯಾ ಚಾಲಕನಿಗೆ) ನಿಲ್ಲಿಸುವಂತೆ ಸಂಕೇತ ಕೊಡು; ನಿಲ್ಲಿಸುವಂತೆ ಮಾಡು: hurry and flag me a taxi ಬೇಗ ಹೋಗಿ ನನಗೆ ಒಂದು ಟ್ಯಾಕ್ಸಿ ನಿಲ್ಲಿಸು.
See also 1flag  2flag  3flag  4flag  5flag  6flag
7flag ಹ್ಲಾಗ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ flagged, ವರ್ತಮಾನ ಕೃದಂತ flagging).
  1. ಜೋಲು ಬೀಳು; ತೊಂಗು; ತಲೆಬಾಗು; ಇಳಿಯಬೀಳು; ನೇತಾಡು; ಜೋಲಾಡು, ತೂಗಾಡು; ಸಡಿಲವಾಗಿ ಹಿಂದುಮುಂದಕ್ಕೆ ಚಲಿಸು.
  2. (ಮುಖ್ಯವಾಗಿ ಗಿಡಗಳ ವಿಷಯದಲ್ಲಿ) ಜೋಲು; ಜೋಲುಹಾಕು; ಕುಗ್ಗು; ಬಾಡು; ಸೊರಗು.
  3. ಹಿಂದೆ ಬೀಳು; ಸೊರಗು; ಬಳಲಿಹೋಗು; ಜಡವಾಗು; ಶಕ್ತಿಗುಂದು; ಸೋತುಹೋಗು; ಕಡಮೆಯಾಗು; ಆಸಕ್ತಿ ಕುಗ್ಗು; ಉತ್ಸಾಹ ತಗ್ಗು: his interest flagged ಅವನ ಆಸಕ್ತಿ ಕುಗ್ಗಿತು.
  4. ಸಪ್ಪೆಯಾಗು; ನಿಸ್ಸಾರವಾಗು; ಸ್ವಾರಸ್ಯ ಕುಗ್ಗು: when everyone had had a say, the topic flagged ಒಬ್ಬೊಬ್ಬನೂ ಹೇಳಿ ಮುಗಿದ ಮೇಲೆ ವಿಷಯದ ಸ್ವಾರಸ್ಯ ಕುಗ್ಗಿತು.