flabby ಹ್ಲಾಬಿ
ಗುಣವಾಚಕ
  1. (ಮಾಂಸ ಮೊದಲಾದವುಗಳ ವಿಷಯದಲ್ಲಿ) ಜೋಲುಬಿದ್ದಿರುವ; ಸುಕ್ಕುಬಿದ್ದಿರುವ; ಸಡಿಲವಾದ; ದೃಢವಲ್ಲದ; ಜಬ್ಬಲಾದ; ಗಟ್ಟಿಯಿಲ್ಲದ: flabby muscles ಜಬ್ಬಲಾದ ಮಾಂಸ ಖಂಡಗಳು.
  2. (ಭಾಷೆ ಯಾ ಶೀಲದ ವಿಷಯದಲ್ಲಿ) ಸತ್ತ್ವಹೀನ; ಬಲಹೀನ; ನಿಸ್ಸತ್ತ್ವ; ಶಿಥಿಲ; ನಿರ್ವೀರ್ಯ; ದುರ್ಬಲ; ಬಿಗಿಯಿಲ್ಲದ; ಸಡಿಲವಾದ; ತ್ರಾಣವಿಲ್ಲದ: dull flabby writings ನೀರಸ, ನಿಸ್ಸತ್ತ್ವ – ಬರಹಗಳು.