fixture ಹಿಕ್ಸ್‍ಚರ್‍
ನಾಮವಾಚಕ
  1. ನೆಲೆವಸ್ತು; (ಅದರ) ಸ್ಥಾನದಲ್ಲಿ ಸರಿಯಾಗಿ ಭದ್ರವಾಗಿಟ್ಟ ವಸ್ತು; ನೆಲೆಗೊಳಿಸಿದ ವಸ್ತು: hanging glass fixtures ತೂಗುವ ಗಾಜಿನ ನೆಲೆವಸ್ತುಗಳು.
  2. (ನ್ಯಾಯಶಾಸ್ತ್ರ) (ಬಹುವಚನದಲ್ಲಿ) ಆನುಷಂಗಿಕ ವಸ್ತುಗಳು; ವ್ಯಕ್ತಿಸ್ವಾಮ್ಯ, ವೈಯಕ್ತಿಕ, ಅನುಬದ್ಧ – ವಸ್ತುಗಳು; ಜಈನು ಯಾ ಮನೆಗೆ ಸಂಬಂಧಿಸಿದ ಮತ್ತು ಕಾನೂನಿನ ದೃಷ್ಟಿಯಲ್ಲಿ ಅದರ ಅಂಗವೆಂದು ಪರಿಗಣಿಸಿರುವ ಯಂತ್ರ ಮೊದಲಾದ ಚರವಸ್ತುಗಳು.
  3. ಬೇರೂರಿದ, ನೆಲೆಯಾದ, ಕಾಯಮ್ಮಾಗಿ ಬೇರುಬಿಟ್ಟ, ಪ್ರತಿಷ್ಠಾಪಿತ, ಸ್ಥಾನಭದ್ರ – ವಸ್ತು, ವ್ಯಕ್ತಿ: professor X seems to be a fixture in the college ಪ್ರಾಧ್ಯಾಪಕ ಎಕ್ಸ್‍ ಕಾಲೇಜಿನಲ್ಲಿ ಕಾಯಅಮ್‍ದಾರನ ಹಾಗೆ ಕಾಣುತ್ತಾನೆ.
  4. (ಪಂದ್ಯ, ಕ್ರೀಡೆ, ಓಟ, ಮೊದಲಾದವಕ್ಕೆ) ಗೊತ್ತುಪಡಿಸಿದ ದಿನ; ಗೊತ್ತುಪಾಡು: foot ball fixture ಕಾಲ್ಚೆಂಡಿನ ಪಂದ್ಯದ ದಿನ.
  5. ಪಂದ್ಯ; ಕ್ರೀಡೆ.
  6. ಹಬ್ಬ; ಜಾತ್ರೆ; ಉತ್ಸವ.