fixedly ಹಿಕ್ಸಿಡ್‍ಲಿ
ಕ್ರಿಯಾವಿಶೇಷಣ
  1. ಭದ್ರವಾಗಿ; ಬಿಗಿಯಾಗಿ; ಬೇರೂರಿದಂತೆ.
  2. ಸ್ಥಿರವಾಗಿ; ಸ್ಥಾಯಿಯಾಗಿ; ನೆಲೆಯಾದ ರೀತಿಯಲ್ಲಿ; ನಿಶ್ಚಲವಾಗಿ; ಕದಲಿಸಲಾರದಂತೆ.
  3. (ಬಣ್ಣದ ವಿಷಯದಲ್ಲಿ) ಗಟ್ಟಿಯಾಗಿ ನಿಲ್ಲುವಂತೆ; ಸ್ಥಿರವಾಗಿ, ಕಾಯಮ್ಮಾಗಿ ಉಳಿಯುವಂತೆ.
  4. ನೆಟ್ಟಂತೆ; ನಿರ್ಧರಿಸಿದಂತೆ; ಮನಸ್ಸು ಮಾಡಿರುವಂತೆ.
  5. ಕಾಯಮ್ಮಾಗಿ ಇಟ್ಟಂತೆ; ನೆಲೆಯಾಗಿಟ್ಟಂತೆ.
  6. ನಿಶ್ಚಿತವಾಗಿ; ನಿರ್ದಿಷ್ಟವಾಗಿ.
  7. ಅಚಲವಾಗಿ; ಬದಲಾಯಿಸದಂತೆ; ಗೊತ್ತಾದ ರೀತಿಯಲ್ಲಿ; ನಿಯತವಾಗಿ; ನಿಖರವಾಗಿ.
  8. ನಿಗದಿಯಾಗಿ.
  9. ಪ್ರತಿವರ್ಷವೂ ಪಂಚಾಂಗದ ಅದೇ ತಾರೀಖಿಗೆ ಬರುವಂತೆ.
  10. ಕ್ರಮದಲ್ಲಿಟ್ಟ ರೀತಿಯಲ್ಲಿ; ವ್ಯವಸ್ಥೆಗೊಂಡ ರೀತಿಯಲ್ಲಿ.
  11. (ಮುಖ್ಯವಾಗಿ ನೋಟದ ವಿಷಯದಲ್ಲಿ) ನೆಟ್ಟ ದೃಷ್ಟಿಯಿಂದ; ಕಣ್ಣಲ್ಲಾಡದಂತೆ.
  12. (ಮನಸ್ಸಿನ ವಿಷಯದಲ್ಲಿ) ಏಕಾಗ್ರತೆಯಿಂದ.