fixation ಹಿಕ್ಸೇಷನ್‍
ನಾಮವಾಚಕ
  1. ಸ್ಥಿರೀಕರಣ; ಭದ್ರಪಡಿಸುವಿಕೆ; ದೃಢಗೊಳಿಸುವಿಕೆ.
  2. (ತತ್ತ್ವ, ಜ್ಞಾಪಕ, ಮೊದಲಾದವುಗಳಲ್ಲಿ) ಬೇರೂರಿಕೆ ಯಾ ಬೇರೂರಿಸುವಿಕೆ.
  3. (ದೃಷ್ಟಿ, ಗಮನ, ಮೊದಲಾದವುಗಳನ್ನು) ಆಕರ್ಷಿಸುವುದು; ಹಿಡಿದು – ನಿಲ್ಲಿಸುವುದು, ಸೆಳೆಯುವುದು.
  4. (ಕಣ್ಣು, ಮುಖಭಾವ) ನಿಶ್ಚಲವಾಗುವಿಕೆ; ನಿಶ್ಚಲಗೊಳಿಸುವಿಕೆ; ಸೆಟೆದುಕೊಳ್ಳುವಿಕೆ.
  5. (ಬಣ್ಣ, ಛಾಯಾಚಿತ್ರ ಬಿಂಬಗಳ) ಸ್ಥಾಯೀಕರಣ; ಗಾಢಗೊಳಿಸಿಕೆ.
  6. (ನೋಟ ಮೊದಲಾದವುಗಳಿಂದ) ಪ್ರತ್ಯೇಕಿಸುವುದು; ಗುರುತಿಸಿಕೆ.
  7. ನೆಲೆಗೊಳಿಸಿಕೆ; ಸ್ಥಾಪನೆ; ಸ್ಥಿರಪಡಿಸಿಕೆ; ಕಾಯಮ್ಮಾಗಿ ಇರಿಸುವುದು.
  8. ನೆಲಸುವುದು; ನೆಲೆಯನ್ನು ತೆಗೆದುಕೊಳ್ಳುವುದು.
  9. ಆಯ್ಕೆಯ ನಿರ್ಧಾರ; ನಿರ್ಣಯಿಸುವುದು; ನಿಶ್ಚಯಿಸಿಕೆ; ಗೊತ್ತು ಮಾಡುವುದು; ತೀರ್ಮಾನಿಸುವುದು.
  10. ಖಚಿತಸ್ಥಾನ ಗೊತ್ತುಪಡಿಸುವುದು.
  11. (ಸ್ಥಳ, ಕಾಲ) ನಿರ್ದೇಶನ; ಗೊತ್ತುಪಡಿಸಿಕೆ.
  12. (ಹೊಣೆ, ದೇಣೆ, ಮೊದಲಾದವುಗಳ ಭಾರದ) ನಿರ್ಣಯ; ನಿರ್ಧಾರಮಾಡುವುದು; ನಿಶ್ಚಯಿಸುವುದು.
  13. (ಬೆಲೆ, ತಾರೀಖು, ಸ್ಥಳವನ್ನು) ಗೊತ್ತುಮಾಡುವುದು; ನಿರ್ಧರಿಸುವುದು; ನಮೂದಿಸುವುದು; ನಿರ್ದಿಷ್ಟಗೊಳಿಸಿಕೆ.
  14. (ಭಾಷೆ, ಸಾಹಿತ್ಯಗಳಲ್ಲಿ) ಮಾರ್ಪಾಡು, ಬೆಳವಣಿಗೆಗಳ – ತಡೆ, ನಿರೋಧ; (ಮಾರ್ಪಾಡು, ಬೆಳವಣಿಗೆಗಳನ್ನು) ತಡೆಯುವುದು; ಸ್ಥಗಿತಗೊಳಿಸಿಕೆ.
  15. ರಿಪೇರಿ; ದುರಸ್ತುಗೊಳಿಸಿಕೆ; ಸೇರ್ಪಡಿಸಿಕೆ; ಸುಸ್ಥಿತಿಗೆ ತರುವುದು; ಸರಿಮಾಡುವುದು.
  16. ಸ್ಥಿರೀಕೃತವಾಗುವುದು; ಭದ್ರಪಡಿಸಲ್ಪಡುವುದು; ದೃಢಗೊಳಿಸಲ್ಪಡುವುದು.
  17. ಬಿಗಿಸುವುದು; ಕಟ್ಟುವುದು; ಬಂಧಿಸುವುದು.
  18. (ದೃಷ್ಟಿ, ಗಮನ, ಮೊದಲಾದವುಗಳ ವಿಷಯದಲ್ಲಿ) ಹಿಡಿದು ನಿಲ್ಲಿಸಲ್ಪಡುವುದು; ಸೆಳೆಯಲ್ಪಡುವುದು.
  19. (ಕಣ್ಣು, ಮುಖಭಾವ) ಅಚಲವಾಗಲ್ಪಡುವುದು, ನಿಶ್ಚಲಗೊಳಿಸಲ್ಪಡುವುದು; ಸೆಟೆಯಲ್ಪಡುವುದು.
  20. (ಬಣ್ಣ, ಛಾಯಾಚಿತ್ರಬಿಂಬಗಳು) ಸ್ಥಾಯಿಯಾಗಿ ನಿಲ್ಲಿಸಲ್ಪಡುವುದು.
  21. (ನೋಟ ಮೊದಲಾದವುಗಳಿಂದ) ಪ್ರತ್ಯೇಕಿಸಲ್ಪಡುವುದು; ಗುರುತಿಸಲ್ಪಡುವುದು.
  22. ನೆಲೆಗೊಳಿಸಲ್ಪಡುವುದು; ಸ್ಥಾಪಿಸಲ್ಪಡುವುದು; ಕಾಯಮ್ಮಾಗಿ ಇರಿಸಲ್ಪಡುವುದು.
  23. ನೆಲೆಸುವಂತೆ ಮಾಡಲ್ಪಡುವುದು.
  24. (ಆಯ್ಕೆ) ನಿರ್ಧರಿಸಲ್ಪಡುವುದು; ನಿರ್ಣಯಿಸಲ್ಪಡುವುದು; ನಿಶ್ಚಯಿಸಲ್ಪಡುವಿಕೆ; ಗೊತ್ತುಮಾಡಲ್ಪಡುವುದು; ತೀರ್ಮಾನಿಸಲ್ಪಡುವುದು.
  25. ಸ್ಥಾನ ಗೊತ್ತು ಮಾಡಲ್ಪಡುವುದು.
  26. (ಸ್ಥಳ, ಕಾಲ) ನಿರ್ದೇಶಿಸಲ್ಪಡುವುದು; ಗೊತ್ತುಪಡಿಸಲ್ಪಡುವುದು.
  27. (ಹೊಣೆ, ದೇಣೆ, ಮೊದಲಾದವು) ನಿರ್ಣಯಿಸಲ್ಪಡುವುದು; ನಿರ್ಧಾರಮಾಡಲ್ಪಡುವುದು; ನಿಶ್ಚಯಿಸಲ್ಪಡುವುದು.
  28. (ಬೆಲೆ, ತಾರೀಖು, ಸ್ಥಳ) ಗೊತ್ತುಮಾಡಲ್ಪಡುವುದು; ನಿರ್ಧರಿಸಲ್ಪಡುವುದು; ನಿರ್ದಿಷ್ಟಗೊಳಿಸಲ್ಪಡುವುದು.
  29. (ಭಾಷೆ, ಸಾಹಿತ್ಯ) ಮಾರ್ಪಾಡು, ಬೆಳವಣಿಗೆಗಳು – ತಡೆಯಲ್ಪಡುವುದು, ನಿರುದ್ಧವಾಗುವುದು, ಸ್ಥಗಿತಗೊಳಿಸಲ್ಪಡುವುದು.
  30. ದುರಸ್ತುಗೊಳಿಸಲ್ಪಡುವುದು; ಸರಿಮಾಡಲ್ಪಡುವುದು.
  31. ಘನೀಕರಣ ಯಾ ಘನೀಕೃತವಾಗುವುದು.
  32. ಗರಣೆ ಕಟ್ಟುವಿಕೆ ಯಾ ಕಟ್ಟಿಸುವಿಕೆ.
  33. (ಘನಪದಾರ್ಥದೊಂದಿಗೆ ಸಂಯೋಗಗೊಳಿಸುವ ಮೂಲಕ ಅನಿಲದ) ಸ್ಥಿರೀಕರಣ.
  34. (ಮನಶ್ಶಾಸ್ತ್ರ) ಸ್ಥಿರೀಕರಣ:
    1. ನಿರ್ದಿಷ್ಟ ವಸ್ತು, ವ್ಯಕ್ತಿ, ಯಾ ಭಾವನೆಗಳ ಮೇಲೆ ಮನಸ್ಸು ನಾಟಿ ಮುಂದಿನ ಬೆಳವಣಿಗೆ ನಿಂತುಹೋಗಿರುವುದು.
    2. ಅಭ್ಯಾಸ ಬೇರೂರುವುದು.
    3. (ಯಾವುದೇ ವಿಷಯದ ಬಗ್ಗೆ) ಅತೀವ ಗೀಳು, ಮೋಹ.