fixate ಹಿಕ್ಸೇಟ್‍
ಸಕರ್ಮಕ ಕ್ರಿಯಾಪದ
  1. ಕಣ್ಣು ಹಾಯಿಸು; ದೃಷ್ಟಿಬೀರು; ನೋಟ ನೆಡು.
  2. (ಮನಶ್ಶಾಸ್ತ್ರ)
    1. ಸ್ಥಿರೀಕರಿಸು; ವ್ಯಕ್ತಿಗಳಿಗೆ ಯಾ ವಸ್ತುಗಳಿಗೆ ಅಪಸಾಮಾನ್ಯವಾದ ರೀತಿಯಲ್ಲಿ ಅಂಟಿಕೊಳ್ಳುವಂತೆ ಯಾ ಒಲವು ತೋರುವಂತೆ, ಬಾಲ್ಯದಲ್ಲಿ ಯಾ ಇನ್ನೂ ಸಾಕಷ್ಟು ಬೆಳೆಯದ ಹಂತದಲ್ಲಿ (ಕಾಮ ಪ್ರವೃತ್ತಿಯನ್ನು ಭಾಗಶಃ) ತಡೆಗಟ್ಟು, ನಿರೋಧಿಸು.
    2. (ವ್ಯಕ್ತಿಯನ್ನು) ಈ ಪ್ರಕ್ರಿಯೆಗೆ ಒಳಪಡಿಸು, ಒಳಗಾಗುವಂತೆ ಮಾಡು.
    3. (ಯಾವುದೇ ವ್ಯಕ್ತಿ, ವಸ್ತು, ಯಾ ಭಾವನೆಯ ಮೇಲೆ) ಮನಸ್ಸನ್ನು ನೆಟ್ಟು ಅದು ಮುಂದಕ್ಕೆ ಬೆಳೆಯದಂತೆ, ಬದಲಾಯಿಸದಂತೆ ಮಾಡು.