See also 2fitting
1fitting ಹಿಟಿಂಗ್‍
ನಾಮವಾಚಕ
  1. ಹೊಂದಿಕೆಯಾಗಿರುವುದು; ಹೊಂದಿಕೊಂಡಿರುವುದು; ಹೊಂದುವುದು; ಒಪ್ಪಿಗೆಯಾಗಿರುವುದು; ಒಪ್ಪುವುದು; ಉಚಿತವಾಗುವುದು; ಯೋಗ್ಯವಾಗುವುದು.
  2. (ಉಡುಪಿನ ವಿಷಯದಲ್ಲಿ) (ಅಳತೆ ಆಕಾರ ಗಾತ್ರಗಳಲ್ಲಿ) ಹೊಂದಿಕೆಯಾಗಿಸುವುದು; ಹೊಂದಿಸುವುದು.
  3. (ಹೊಂದಿಕೆಯ ಭಾಗ) ಹಿಡಿಸುವುದು; ಕೂರಿಸುವುದು; ಕೂಡುವುದು, ಹೊಂದಿಸುವುದು.
  4. ಹೊಂದಿಕೆ ಮಾಡುವುದು; ಜೋಡಿಸುವಿಕೆ; ಕೂಡಿಸಿಕೆ; ಸೇರಿಸಿಕೆ.
  5. ಸರಿಹೊಂದಿಸುವುದು; ತಕ್ಕಂತೆ ಮಾಡುವುದು; ಹಾಳತಗೊಳಿಸುವಿಕೆ; ಹೊಂದುವಂತೆ ಮಾಡುವುದು.
  6. (ವ್ಯಕ್ತಿ, ವಸ್ತುವನ್ನು) ಸಮರ್ಥನನ್ನಾಗಿ, ಸಮರ್ಥವಾಗಿ – ಮಾಡುವುದು; ಅರ್ಹವಾಗಿ ಮಾಡುವುದು.
  7. ಸಜ್ಜುಗೊಳಿಸುವುದು; ಸಿದ್ಧಪಡಿಸುವುದು.
  8. ಹವಣಿಸುವುದು; ಒದಗಿಸುವುದು.
  9. (ಸಾಮಾನ್ಯವಾಗಿ ಬಹುವಚನದಲ್ಲಿ)
    1. ಹೊಂದಾವಣೆಗಳು; ಅಳವಡಿಕೆಗಳು; ಅಳವಡಿಸಿದ, ಹೊಂದಿಸಿದ – ವಸ್ತುಗಳು.
    2. ಉಪಕರಣಗಳು; ಸಲಕರಣೆಗಳು: electric light fittings ವಿದ್ಯುದ್ದೀಪ ಸಲಕರಣೆಗಳು.
    3. ಸಜ್ಜು; ಅಣಿಕಟ್ಟು; ಪೀಠಸಾಮಗ್ರಿ: office fittings ಕಾರ್ಯಾಲಯದ – ಸಜ್ಜು, ಪೀಠೋಪಕರಣಗಳು.
See also 1fitting
2fitting ಹಿಟಿಂಗ್‍
ಗುಣವಾಚಕ
  1. ಹೊಂದಿಕೊಳ್ಳುವ; ಹೊಂದಿಕೆಯಾಗುವ; ಹೊಂದುವ; ಒಪ್ಪುವ; ಸರಿಯಾದ.
  2. ತಕ್ಕ; ಯೋಗ್ಯ; ಒಪ್ಪುವ; ಉಚಿತ: a fitting rebuke for his rudeness ಅವನ ಒರಟುತನಕ್ಕೆ ತಕ್ಕ ವಾಗ್ದಂಡನೆ.