See also 2fit  3fit  4fit  5fit  6fit
1fit ಹಿಟ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಪದ್ಯಭಾಗ; ಕಾವ್ಯಖಂಡ.

See also 1fit  3fit  4fit  5fit  6fit
2fit ಹಿಟ್‍
ನಾಮವಾಚಕ
  1. (ಬಿಟ್ಟುಬಿಟ್ಟು ಬರುವ) ರೋಗದ ಕೆರಳಿಕೆ; ರೋಗದ ಜೋರು; ಬೇನೆಯ ತೀವ್ರತೆ.
  2. (ಯಾವುದಾದರೂ) ಕಾಯಿಲೆಯ ಥಟ್ಟನೆಯ, ತಾತ್ಕಾಲಿಕ – ತಟ್ಟುವಿಕೆ, ಸೋಂಕು.
  3. (ಪ್ರಜ್ಞಾಹೀನತೆ ಯಾ ಸೆಳೆವು ಉಂಟುಮಾಡುವ) ಉನ್ಮಾದ ರೋಗ, ತೀಕ್ಷ್ಣವಾಯು, ಮೂರ್ಛೆ ರೋಗ, ಪಾರ್ಶ್ವವಾಯು ಯಾ ಅಪಸ್ಮಾರದ ಥಟ್ಟನೆಯ ಹೊಡೆತ.
  4. ಆವೇಶ; ಕೆರಳು; ರಭಸ; ಒತ್ತರ; ಆವೇಗ; ಥಟ್ಟನೆಯ ಉದ್ವೇಗ: a fit of energy, idleness, devotion, indifference ಚೈತನ್ಯದ ಆವೇಶ, ಸೋಮಾರಿತನದ ಕೆರಳು, ಭಕ್ತಿಯ ಆವೇಗ, ಉದಾಸೀನದ ಒತ್ತರ.
  5. ಮನಸ್ಸು; ಚಿತ್ತ; ಚಪಲ; ಹುಚ್ಚು; ಖುಷಿ; ತಿಕ್ಕಲು: when the fit was on him ಅವನಿಗೆ ಮನಸ್ಸು ಬಂದಾಗ, ತಿಕ್ಕಲು ತಿರುಗಿದಾಗ, ಹುಚ್ಚು ಹತ್ತಿದಾಗ.
ಪದಗುಚ್ಛ
  1. by (or in) fits ಬಿಟ್ಟುಬಿಟ್ಟು; ಒಂದು ಕ್ರಮವಿಲ್ಲದೆ; ಹುಚ್ಚು ತಿರುಗಿದಾಗ: this radio works by fits ಈ ರೇಡಿಯೋ ಬಿಟ್ಟುಬಿಟ್ಟು ಕೆಲಸ ಮಾಡುತ್ತದೆ.
  2. by (or in) fits and starts = ಪದಗುಚ್ಛ \((1)\).
ನುಡಿಗಟ್ಟು
  1. beat one into fits ಸುಲಭವಾಗಿ ಸೋಲಿಸು; ಅವಮಾನವಾಗುವಂತೆ ಸೋಲಿಸು.
  2. give one a fit (ವ್ಯಕ್ತಿಯನ್ನು)
    1. ಚಕಿತಗೊಳಿಸು; ಗರಬಡಿಸು; ಆಶ್ಚರ್ಯವನ್ನುಂಟುಮಾಡು; ಬೆರಗುಗೊಳಿಸು.
    2. ತಲ್ಲಣಗೊಳಿಸು; ಗಾಬರಿಪಡಿಸು.
    3. ರೇಗಿಸು; ಉದ್ರೇಕ ಉಂಟುಮಾಡು; ಕೋಪಗೊಳಿಸು.
  3. give one fits = ನುಡಿಗಟ್ಟು \((1)\).
  4. throw a fit (ಅಶಿಷ್ಟ) ಬಹಳ ಸಿಟ್ಟಾಗು; ಉದ್ರೇಕಗೊಳ್ಳು: your father will throw a fit when he hears what you have done ನೀನು ಮಾಡಿರುವುದನ್ನು ಕೇಳಿದಾಗ ನಿನ್ನ ತಂದೆ ಬಹಳ ರೇಗುತ್ತಾರೆ.
See also 1fit  2fit  4fit  5fit  6fit
3fit ಹಿಟ್‍
ಗುಣವಾಚಕ
  1. (ಯಾವುದೇ ಉದ್ದೇಶ ಯಾ ಸ್ಥಾನಮಾನಕ್ಕೆ) ಹೊಂದಿಕೊಳ್ಳುವ; ತಕ್ಕ; ಒಪ್ಪುವ; ಸಲ್ಲುವ; ಹೊಂದುವ; ಸರಿಯಾದ: food that is fit to be eaten ತಿನ್ನಲು ತಕ್ಕ ಆಹಾರ.
  2. ಒಪ್ಪುವ; ತಕ್ಕ; ಯೋಗ್ಯವಾದ; ಉಚಿತ: a dinner fit for the king ರಾಜೋಚಿತ ಭೋಜನ; ದೊರೆಗೆ ತಕ್ಕ ಭೋಜನ.
  3. ಯೋಗ್ಯವಾದ; ತಕ್ಕ; ಒಪ್ಪುವ; ಉಚಿತ; ಶಿಷ್ಟ; ಸಮಂಜಸ; ಸರಿಯಾದ; ನ್ಯಾಯವಾದ: it is not fit that you should make merry ನೀನು ಮೋಜು ಮಾಡುವುದು ಸರಿಯಲ್ಲ.
  4. (ಯಾವುದೇ ಕೆಲಸಮಾಡಲು) ತಯಾರಿರುವ; ಸಿದ್ಧವಾಗಿರುವ; ಸನ್ನದ್ಧ; ಸುಸ್ಥಿತಿಲ್ಲಿರುವ; ಸಮರ್ಥನಾಗಿರುವ; ಸರಿಯಾದ ಸ್ಥಿತಿಯಲ್ಲಿರುವ.
  5. (ಯಾವುದಾದರೂ ಉಗ್ರಕಾರ್ಯ ಮಾಡುವಷ್ಟು) ಮುನಿಸಿಕೊಂಡ; ರೇಗಿದ; ಸಿಟ್ಟಿಗೆದ್ದ; ಕೋಪಗೊಂಡ: the countryfolk are fit to fell him ಗ್ರಾಮಾಂತರದ ಜನ ಅವನನ್ನು ಹೊಡೆದು ಕೆಡುವುವಷ್ಟು ಕೋಪಗೊಂಡಿದ್ದಾರೆ.
  6. ಕ್ಲೇಶಗೊಂಡ; ಚಿಂತೆಪಟ್ಟ; ಕಳವಳಗೊಂಡ; ಬೇಸರಗೊಂಡ.
  7. (ನೆಲಕ್ಕೆ ಬೀಳುವಷ್ಟು) ಬಳಲಿದ; ದಣಿದ; ಆಯಾಸಗೊಂಡ; ಸುಸ್ತಾದ: they went on working till they were fit to drop ಆಯಾಸದಿಂದ ಕುಸಿದುಬೀಳುವವರೆಗೂ ಅವರು ದುಡಿಯುತ್ತಾ ಹೋದರು.
  8. ಒಳ್ಳೆಯ ದೇಹದಾರ್ಢ್ಯವಿರುವ; ಒಳ್ಳೆಯ ಆರೋಗ್ಯ ಸ್ಥಿತಿಯಿರುವ.
ಪದಗುಚ್ಛ
  1. see (or think) fit to (ಹಾಗೆ) ನಿಶ್ಚಯಿಸು; ತೀರ್ಮಾನಿಸು; ನಿರ್ಣಯಿಸು: he didn’t see fit to adopt my suggestion ನನ್ನ ಸೂಚನೆಯಂತೆ ನಡೆಯಲು ಅವನು ಮನಸ್ಸು ಮಾಡಲಿಲ್ಲ (ನಿಶ್ಚಯಿಸಲಿಲ್ಲ).
  2. survival of the fittest ಸಮರ್ಥರ ಉಳಿವು; (ವಿವಿಧ ಜೀವಿಗಳು) ತಮ್ಮ ಉಳಿವಿಗಾಗಿ ನಡೆಸುವ ಹೋರಾಟದಲ್ಲಿ ಅತ್ಯಂತ ಯೋಗ್ಯವಾದವುಗಳ ಉಳಿವು.
ನುಡಿಗಟ್ಟು
  1. fit as a fiddle ಒಳ್ಳೆಯ ಆರೋಗ್ಯದಲ್ಲಿ ಮತ್ತು ಹುರುಪಿನಲ್ಲಿ; ಒಳ್ಳೆಯ ಹುಮ್ಮಸ್ಸಿನಲ್ಲಿ; ಸುಸ್ಥಿತಿಯಲ್ಲಿ.
  2. not fit to hold a candle to = $^1$candle ನುಡಿಗಟ್ಟು \((6)\).
See also 1fit  2fit  3fit  5fit  6fit
4fit ಹಿಟ್‍
ಕ್ರಿಯಾವಿಶೇಷಣ

(ಅಶಿಷ್ಟ) ಹಾಗಾಗುವಂತೆ; ಅಂತಾಗುವಂತೆ; ಹಾಗಾಗಲು ತಕ್ಕುದಾಗಿ; ಅಂತಾಗುವ ರೀತಿಯಲ್ಲಿ: crying fit to burst herself ಅವಳ ಎದೆ ಬಿರಿಯುವಂತೆ ಅಳುತ್ತಾ.

See also 1fit  2fit  3fit  4fit  6fit
5fit ಹಿಟ್‍
ಸಕರ್ಮಕ ಕ್ರಿಯಾಪದ
  1. ಸರಿಹೊಂದು; ಹೊಂದಿಕೊ; ಹೊಂದು; ಒಪ್ಪು; ಉಚಿತವಾಗು; ಯೋಗ್ಯವಾಗು: this boldness does not fit a stranger ಈ ದಿಟ್ಟತನ ಹೊಸಬನಿಗೆ ಒಪ್ಪುವುದಿಲ್ಲ.
  2. (ಮುಖ್ಯವಾಗಿ ಉಡುಪಿನ ವಿಷಯದಲ್ಲಿ) ಸರಿಯಾಗಿರು; ತಕ್ಕ ಅಳತೆ, ಆಕಾರ, ಗಾತ್ರ – ಉಳ್ಳದ್ದಾಗಿರು: the dress fitted her perfectly ಉಡುಪು ಅವಳಿಗೆ (ಅಳತೆ ಆಕಾರಗಳಲ್ಲಿ) ಪೂರ್ಣವಾಗಿ ಸರಿಹೋಯಿತು.
  3. (ಪಾತ್ರೆ ಯಾ ಸಂಪುಟದಲ್ಲಿ) ಹಿಡಿಸು; ಕೂರಿಸು; ಹೊಂದಿಕೊ.
  4. (ವ್ಯಕ್ತಿ ಮೊದಲಾದವರಿಗೆ) ಹೊಂದಿಕೊ; ಹೊಂದಿಕೆಯಾಗು.
  5. ಹಿಡಿಸುವಂತೆ ಮಾಡು; ಕೂಡಿಸು; ಹೊಂದಿಸು; ಹೊಂದಿಕೊಳ್ಳುವಂತೆ – ಮಾಡು, ಅಳವಡಿಸು: a strong ship fitted for a man-of-war ಯುದ್ಧನೌಕೆಗೆ ತಕ್ಕಂತೆ ಅಳವಡಿಸಿದ ಬಲವಾದ ನೌಕೆ.
  6. ತಕ್ಕದ್ದನ್ನಾಗಿ ಮಾಡು; ಸಮರ್ಥವಾಗಿ ಮಾಡು; ಯೋಗ್ಯವಾಗಿ ಮಾಡು; ಅರ್ಹವಾಗಿ ಮಾಡು; ಸಿದ್ಧಪಡಿಸು; ತಯಾರಿಸು: this school fits students for college ಈ ಶಾಲೆ ವಿದ್ಯಾರ್ಥಿಗಳನ್ನು ಕಾಲೇಜಿಗೆ ತಯಾರಿಸುತ್ತದೆ.
  7. (ಹಡಗು ಮೊದಲಾದವಕ್ಕೆ) ಹವಣಿಸು; ಒದಗಿಸು.
  8. (ಸೂಕ್ತವಾದ ಸ್ಥಳದಲ್ಲಿ) ಹಾಕು; ಒದಗಿಸು; ಹೊಂದಿಸು; ಜೋಡಿಸು: fit a lock on(or to) the door ಬಾಗಿಲಿಗೆ ಬೀಗಹಾಕು, ಜೋಡಿಸು.
ಅಕರ್ಮಕ ಕ್ರಿಯಾಪದ
  1. (ಆಕಾರ, ಅಳತೆಗಳಲ್ಲಿ) ಸರಿಹೊಂದು; ಸರಿಯಾಗಿರು: these shoes fit well ಈ ಷೂಗಳು ಸರಿಯಾಗಿವೆ.
  2. ಯುಕ್ತವಾಗಿರು; ಉಚಿತವಾಗಿರು.
  3. (ಪಾತ್ರೆ, ಜಾಗ, ಪರಿಸ್ಥಿತಿ, ಮೊದಲಾದವುಗಳಿಗೆ) ಹಿಡಿಸು: ಹೊಂದು: this peg fits into this hole ಈ ಬೆಣೆ ಈ ತೂತಿಗೆ ಹಿಡಿಸುತ್ತದೆ. the statement fits in with our story ಹೇಳಿಕೆ ನಮ್ಮ ಕತೆಗೆ ಹೊಂದಿಕೊಳ್ಳುತ್ತದೆ.
ಪದಗುಚ್ಛ
  1. fit in
    1. ಹೊಂದಿಸು; ಹೊಂದಿಕೊಳ್ಳು; ಹೊಂದಿಕೆಯಿರು.
    2. ಉಚಿತವಾದ ಕಾಲ ಯಾ ಸ್ಥಳವನ್ನು ಗೊತ್ತು ಮಾಡು; ಉಚಿತವಾದ ಕಾಲ ಯಾ ಸ್ಥಳದಲ್ಲಿರು: I must fit my holidays in with yours ನನ್ನ ರಜೆಯನ್ನು ನಿನ್ನ ರಜೆಯ ಜೊತೆಗೆ ಹೊಂದಿಸಬೇಕು.
  2. fit on (ಉಡುಪನ್ನು) ಧರಿಸಿನೋಡು; ಹಾಕಿಕೊಂಡು ನೋಡು; ತೊಟ್ಟು ನೋಡು.
  3. fit out (or up) ಸಜ್ಜು ಮಾಡು; ಸಜ್ಜುಗೊಳಿಸು; ಅಳವಡಿಸು: fit out a ship for a long voyage ದೀರ್ಘಯಾನಕ್ಕೆ ನೌಕೆಯನ್ನು ಸಜ್ಜುಗೊಳಿಸು. hotel fitted up with modern comforts ಆಧುನಿಕ ಸೌಕರ್ಯಗಳಿಂದ ಸಜ್ಜುಗೊಳಿಸಿದ ಹೋಟೆಲು.
ನುಡಿಗಟ್ಟು

fit the bill = 1fill the bill.

See also 1fit  2fit  3fit  4fit  5fit
6fit ಹಿಟ್‍
ನಾಮವಾಚಕ

(ಉಡುಪಿನ ಯಾ ಯಂತ್ರಭಾಗದ) ಹೊಂದಿಕೆ; ಜೋಡಣೆ; ಹೊಂದಾವಣೆ; ಹೊಂದಿಕೆಯ ರೀತಿ: a tight fit ಬಿಗಿಯಾದ ಹೊಂದಿಕೆ; ಭದ್ರವಾದ ಹೊಂದಾವಣೆ.