See also 2firm  3firm  4firm
1firm ಹರ್ಮ್‍
ನಾಮವಾಚಕ
  1. (ವ್ಯಾಪಾರ, ವಾಣಿಜ್ಯ, ಕಸಬು, ಮೊದಲಾದವುಗಳ) ವ್ಯವಹಾರ ಸಂಸ್ಥೆ; ವ್ಯಾಪಾರ ನಡಸುವ ಇಬ್ಬರ ಯಾ ಹೆಚ್ಚು ಮಂದಿಯ ಪಾಲುಗಾರಿಕೆ.
  2. (ಒಟ್ಟಿಗೆ ಕೆಲಸ ಮಾಡುವ) ತಂಡ; ಗುಂಪು; ಮುಖ್ಯವಾಗಿ ಆಸ್ಪತ್ರೆಯ ವೈದ್ಯರು ಮತ್ತು ಅವರ ಸಹಾಯಕರು.
ಪದಗುಚ್ಛ

long firm (ಬ್ರಿಟಿಷ್‍ ಪ್ರಯೋಗ) ಗಂಟುಕಳ್ಳರ ತಂಡ; ಸರಕನ್ನು ಪಡೆದು ಹಣ ಕೊಡದೆ ಮೋಸಮಾಡುವ ವಂಚಕರ ತಂಡ.

See also 1firm  3firm  4firm
2firm ಹರ್ಮ್‍
ಗುಣವಾಚಕ
  1. (ರಚನೆಯಲ್ಲಿ) ಗಟ್ಟಿಯಾದ; ದೃಢವಾದ; ಭದ್ರವಾದ.
  2. ನೆಟ್ಟ; ಸ್ಥಿರ; ನಾಟಿದ.
  3. ಅಲ್ಲಾಡದ; ಅಲುಗದ; ಕದಲದ; ನಿಶ್ಚಲ; ಅಚಲ.
  4. ಸುಸ್ಥಾಪಿತ; ನೆಲೆಗೊಂಡ.
  5. ನಿರ್ವಿಕಾರ; ನಿರ್ವಿಕಲ್ಪ; ಬದಲಾಯಿಸದ; ವ್ಯತ್ಯಾಸವಾಗದ; ಮಾರ್ಪಾಡಾಗದ.
  6. (ಒಪ್ಪಂದ ಯಾ ಕರಾರಿನ ವಿಷಯದಲ್ಲಿ ಒಪ್ಪಿತವಾದ ಮೇಲೆ) ರದ್ದಾಗದ; ತೆಗೆದುಹಾಕದ.
  7. ದೃಢನಿಶ್ಚಯದ; ಹಿಂದೆಗೆಯದ; ಅಚಂಚಲ; ಸ್ಥಿರಸಂಕಲ್ಪದ.
  8. ನೆಚ್ಚಿನ; ನಿಷ್ಠೆಯ.
  9. (ವಾಣಿಜ್ಯ, ಬೆಲೆಗಳು, ಸರಕು) ಸ್ಥಿರ; ಸ್ತಿಮಿತ; ಒಂದೇ ಮಟ್ಟದಲ್ಲಿ ಯಾ ಬೆಲೆಯಲ್ಲಿ ಇರುವ.
See also 1firm  2firm  4firm
3firm ಹರ್ಮ್‍
ಕ್ರಿಯಾವಿಶೇಷಣ
  1. ಗಟ್ಟಿಯಾಗಿ; ದೃಢವಾಗಿ; ಭದ್ರವಾಗಿ: stand firm ದೃಢವಾಗಿ ನಿಲ್ಲು.
  2. ಅಳ್ಳಾಡದಂತೆ; ಕದಲದಂತೆ; ಅಚಲವಾಗಿ.
  3. ದೃಢನಿಶ್ಚಯದಿಂದ; ಹಿಂದೆಗೆಯದೆ.
See also 1firm  2firm  3firm
4firm ಹರ್ಮ್‍
ಸಕರ್ಮಕ ಕ್ರಿಯಾಪದ
  1. ಗಟ್ಟಿಮಾಡು; ಘನೀಕರಿಸು.
  2. (ಗಿಡ ನೆಟ್ಟ ಮೇಲೆ ನೆಲವನ್ನು) ದಟ್ಟಗೊಳಿಸು.
  3. (ಸಸಿಯನ್ನು ನೆಲದಲ್ಲಿ) ಭದ್ರವಾಗಿ – ಹೂಳು, ನೆಡು.
ಅಕರ್ಮಕ ಕ್ರಿಯಾಪದ
  1. ಗಟ್ಟಿಯಾಗು; ಘನೀಭವಿಸು.
  2. (ಬೆಲೆ ಮೊದಲಾದವು) ಸ್ಥಿರವಾಗು; ಸ್ತಿಮಿತಗೊಳ್ಳು; ನೆಲೆಯಾಗಿ ನಿಲ್ಲು; ದೃಢವಾಗು.