finisher ಹಿನಿಷರ್‍
ನಾಮವಾಚಕ
  1. ತರುವವನು ಯಾ ಕೊನೆಗಾಣಿಸುವದು.
  2. ಕೊನೆಗೆ ತಲುಪುವವನು ಯಾ ಕೊನೆಮುಟ್ಟುವದು.
  3. ಮುಗಿಸುವವನು ಯಾ ಮುಗಿಸುವದು.
  4. (ಎಲ್ಲ ಯಾ ಉಳಿದಿರುವ ಆಹಾರವನ್ನು) ತಿಂದು ಮುಗಿಸಿಬಿಡುವವನು.
  5. (ಪೂರ್ತಿ ಪುಸ್ತಕವನ್ನು, ಅದರ ಉಳಿದಿರುವ ಭಾಗವನ್ನು) ಓದಿ ಮುಗಿಸಿಬಿಡುವವನು.
  6. ಪೂರೈಸುವವನು; ಪೂರ್ತಿಗೊಳಿಸುವವನು.
  7. ಕೊಲ್ಲುವವನು; ತೀರಿಸಿಬಿಡುವವನು.
  8. ಸೋಲಿಸಿ ಸುಸ್ತುಮಾಡಿಬಿಡುವವನು ಯಾ ನಿಸ್ಸಹಾಯಕಗೊಳಿಸಿಬಿಡುವುದು.
  9. ಒಪ್ಪಗಾರ; ಒಪ್ಪಗೊಳಿಸುವವನು. ಪರಿಷ್ಕರಿಸುವವನು; ಸಂಸ್ಕರಿಸುವವನು; ಓರೆಕೋರೆಗಳನ್ನು ತಿದ್ದಿ ಪರಿಪೂರ್ಣಗೊಳಿಸುವವನು.
  10. ವಿದ್ಯಾಭ್ಯಾಸ ಮುಗಿಸುವವನು.
  11. ಕೊನೆಗೆ ಬರುವವನು; ಕೊನೆ ಸೇರುವವನು; ಪೂರೈಸುವವನು.
  12. ಮಾಡಿ ಮುಗಿಸುವವನು.
  13. ಮುಗಿಯುವಂಥದು; ಕೊನೆಗೊಳ್ಳುವಂಥದು.
  14. (ಮುಖ್ಯವಾಗಿ ಕಾರ್ಖಾನೆ ಸಾಮಾನುಗಳ ತಯಾರಿಕೆಯಲ್ಲಿ)
    1. ಕೊನೆಯ ಒಪ್ಪಗೆಲಸ ಮಾಡುವ ಕೆಲಸಗಾರ.
    2. ಒಪ್ಪಗೆಲಸ ಮಾಡುವ ಯಂತ್ರ ಯಾ ಸಾಧನ.
  15. (ಆಡುಮಾತು) ಅಪಜಯಗೊಳಿಸುವಂಥ ಪೆಟ್ಟು, ಹೊಡೆತ.
  16. (ಆಡುಮಾತು) ಜಜ್ಜಿಬಿಡುವ ಹೊಡೆತ, ಪೆಟ್ಟು, ಆಘಾತ, ಮೊದಲಾದವು.