See also 2finger
1finger ಹಿಂಗರ್‍
ನಾಮವಾಚಕ
  1. ಹಸ್ತಾಂಗುಲಿ; (ಕೈಯ ಐದು ಬೆರಳುಗಳಲ್ಲಿ ಒಂದು) ಬೆರಳು; ಬೆಟ್ಟು.
  2. ಬೆರಳು; ಬೆಟ್ಟು; ಅಂಗುಲಿ:
    1. ಕೈಚೀಲ ಮೊದಲಾದವುಗಳಲ್ಲಿನ ಬೆರಳಿನ ಭಾಗ.
    2. ಬೆರಳಿನಂಥ ವಸ್ತು.
    3. (ಮುಖ್ಯವಾಗಿ ಹಣ್ಣು ಮೊದಲಾದ ವಸ್ತುಗಳಲ್ಲಿ ಯಾ ಹಲವು ಯಂತ್ರಗಳಲ್ಲಿ) ಬೆರಳಿನಂಥ ಭಾಗ.
    4. ಉದ್ದವಾಗಿ, ಕಿರಿದಾದ – ರಚನೆ, ನಿರ್ಮಾಣ, ಉದಾಹರಣೆಗೆ ವಿಮಾನ ನಿಲ್ದಾಣದ ವಾಸ್ತುಶಿಲ್ಪದಲ್ಲಿರುವಂಥದ್ದು.
  3. (ಅಶಿಷ್ಟ) ಬೆರಳು; ಗಾಜಿನ ಲೋಟದಲ್ಲಿ ಒಂದು ಬೆರಳುದ್ದದಷ್ಟು ಮದ್ಯ.
  4. (ಅಶಿಷ್ಟ) ಪೊಲೀಸಿನವ.
  5. (ಅಶಿಷ್ಟ) ಆವೇದಕ; ಅಧಿಕಾರಿಗಳಿಗೆ ಅಪರಾಧಗಳನ್ನು ತಿಳಿಸುವವ.
  6. (ಅಶಿಷ್ಟ) ಜೇಬುಗಳ್ಳ ಮೊದಲಾದವರು.
ಪದಗುಚ್ಛ
  1. fourth finger ನಾಲ್ಕನೆಯ ಬೆರಳು; ಉಂಗುರದ ಬೆರಳು; ಅನಾಮಿಕೆ.
  2. little finger
    1. ಕಿರುಬೆರಳು; ಕನಿಷ್ಠಿಕೆ.
    2. ~(ರೂಪಕವಾಗಿ) ದೇಹದ ಅತ್ಯಂತ ಚಿಕ್ಕ ಭಾಗ: more wit in his little finger than in your whole body ಅವನ ಕಿರುಬೆರಳಿನಲ್ಲಿರುವ ಜಾಣ್ಮೆ ನಿನ್ನ ಇಡೀ ದೇಹದಲ್ಲೇ ಇಲ್ಲ; ನಿನ್ನ ಇಡೀ ದೇಹದಲ್ಲಿರುವುದಕ್ಕಿಂತ ಹೆಚ್ಚಿನ ಜಾಣ್ಮೆ ಅವನ ಕಿರುಬೆರಳಿನಲ್ಲಿದೆ.
ನುಡಿಗಟ್ಟು
  1. $^2$burn one’s fingers.
  2. $^2$cross one’s fingers.
  3. done by the fingers of God ದೈವಪ್ರೇರಣೆಯಿಂದಾದ.
  4. get, pull take one’s finger out (ಅಶಿಷ್ಟ) ತ್ವರೆಮಾಡು.
  5. have a finger in the pie (ಮುಖ್ಯವಾಗಿ ತನಗೆ ಸಂಬಂಧಪಡದ ವಿಷಯದಲ್ಲಿ) ಕೈಹಾಕು; ಕೈಹಚ್ಚು; ಭಾಗವಹಿಸು; ಆಸಕ್ತಿವಹಿಸು; ಪಾತ್ರವಹಿಸು.
  6. have at one’s finger tips (or finger ends) ಕರತಲಾಮಲಕವಾಗಿ ಹೊಂದಿರು; ಬೆರಳಿನ ತುದಿಯಲ್ಲೇ ಹೊಂದಿರು; ಚೆನ್ನಾಗಿ ತಿಳಿದಿರು; ಸ್ವಾಧೀನದಲ್ಲಿಟ್ಟುಕೊಂಡಿರು.
  7. his fingers are (all) thumbs ಅವನದು ಶುದ್ಧ ಒಡ್ಡುಕೈ; ಅವನದು ಒರಟು ಕೈ; ಅವನು ಒಡ್ಡೊಡ್ಡಾದ, ನಾಜೂಕಿಲ್ಲದ ಮನುಷ್ಯ.
  8. lay a finger on (or upon)
    1. ಬೆರಳು ಸೋಕಿಸು; ಬೆರಳಿನಲ್ಲಿ ಮುಟ್ಟು.
    2. ಸಂಬಂಧಕ್ಕೆ, ಗೊಡವೆಗೆ, ತಂಟೆಗೆ – ಬರು ಯಾ ಹೋಗು: if you dare lay a finger on him ಅವನಿಗೆ ಬೆರಳು ಸೋಕಿಸಿದ್ದೇ ಆದರೆ; ನೀನು ಅವನ ತಂಟೆಗೇನಾದರೂ ಹೋದರೆ ಯಾ ಬಂದರೆ.
  9. lay one’s finger on
    1. ಖಚಿತವಾಗಿ ತೋರಿಸು; ನಿರ್ದಿಷ್ಟವಾಗಿ ತೋರಿಸು; ಬೊಟ್ಟು ಮಾಡು; ಬೆರಳಿಟ್ಟು ತೋರಿಸು: laid his finger on the real trouble ನಿಜವಾದ ತೊಂದರೆಯನ್ನು ಖಚಿತವಾಗಿ ತೋರಿಸಿದ.
    2. ನೆನಪಿಗೆ ತಂದುಕೊ; ನೆನಪು ಮಾಡಿಕೊ: I know his name, but I can’t lay my finger on it ಅವನ ಹೆಸರನ್ನು ಬಲ್ಲೆ, ಆದರೆ ಅದನ್ನು ನೆನಪಿಗೆ ತಂದುಕೊಳ್ಳಲಾರೆ.
    3. ಕಂಡುಹಿಡಿ; ಇರುವ ಸ್ಥಳ ಪತ್ತೆಹಚ್ಚು: I haven’t been able to lay my finger on the book you wanted ನೀನು ಬಯಸಿದ ಪುಸ್ತಕ ಎಲ್ಲಿದೆಯೋ ಅದನ್ನು ನಾನು ಕಂಡುಹಿಡಿಯಲಾಗಲಿಲ್ಲ.
  10. let slip through one’s fingers ಹಿಡಿತ, ಅವಕಾಶ – ಕಳೆದುಕೊ.
  11. lift, move, raise a finger ಬೆರಳಲುಗಿಸು; ಬೆರಳೆತ್ತು; ಅತ್ಯಲ್ಪ ಪ್ರಯತ್ನವನ್ನಾದರೂ ಮಾಡು: the house was falling into ruin, but he would not lift a finger to repair it ಮನೆ ಕುಸಿದು ಬೀಳುತ್ತಿತ್ತು, ಆದರೂ ಅದನ್ನು ದುರಸ್ತುಮಾಡಲು ಅವನು ಬೆರಳಲುಗಿಸಲೂ ಇಲ್ಲ.
  12. look through one’s finger at ಕಾಣದವನಂತೆ ನಟಿಸು: if the king himself should look through his fingers and wink at it ದೊರೆಯೇ ಅದನ್ನು ಕಂಡರೂ ಕಾಣದವನಂತೆ ನಟಿಸಿದರೆ.
  13. my fingers itch to do..... ಅದನ್ನು ಮಾಡಲು ನನ್ನ ಕೈ ಕಡಿಯುತ್ತದೆ, ತುರಿಸುತ್ತದೆ, ತವಕಿಸುತ್ತದೆ.
  14. point finger at (ಮುಖ್ಯವಾಗಿ ತಿರಸ್ಕಾರದಿಂದ) ಒಬ್ಬನತ್ತ ಯಾ ಒಂದರತ್ತ ಬೊಟ್ಟುಮಾಡು, ಬೆರಳು ತೋರಿಸು.
  15. put a finger on (or upon) = ನುಡಿಗಟ್ಟು \((8)\).
  16. put the finger on (ಅಶಿಷ್ಟ)
    1. ಪೊಲೀಸರಿಗೆ (ಒಬ್ಬನು) ಅಪರಾಧಿಯೆಂದು ಸಾಕ್ಷ್ಯಕೊಡು, ಆಪಾದಿಸು, ಯಾ ತೋರಿಸು.
    2. ಹಂತಕನು ಕೊಲ್ಲಬೇಕೆಂದಿರುವವನನ್ನು ಅವನಿಗೆ ಬೆರಳುಮಾಡಿ, ಬೆರಳಿಟ್ಟು ತೋರಿಸು.
  17. shake (or wag) one’s finger at (ತೆಗಳಿಕೆಯ ಸೂಚನೆಯಾಗಿ) ಒಬ್ಬನ ಕಡೆ ಬೆರಳಾಡಿಸು, ಬೆರಳನ್ನು ತೋರಿಸಿ ಅಲ್ಲಾಡಿಸು.
  18. stir a finger = ನುಡಿಗಟ್ಟು \((11)\).
  19. to the finger-nails ಪೂರ್ತಿಯಾಗಿ; ಸಂಪೂರ್ಣವಾಗಿ.
  20. turn (or twist) person round one’s (little) finger (ಒಬ್ಬನನ್ನು) ಹೇಗೆಂದರೆ ಹಾಗೆ ಆಡಿಸು; ಸರಾಗವಾಗಿ ಅವನ ಮೇಲೆ ಪೂರ್ಣ ಪ್ರಭಾವ ಬೀರು: she turns her husband round her little finger ಅವಳು ತನ್ನ ಗಂಡನನ್ನು ಹೇಗೆಂದರೆ ಹಾಗೆ ಆಡಿಸುತ್ತಾಳೆ.
  21. with a wet finger ಸುಲಭವಾಗಿ; ಸಲೀಸಾಗಿ; ಸರಾಗವಾಗಿ: if Bhavya were here she would manage them all with a wet finger ಭವ್ಯ ಇಲ್ಲಿ ಇದ್ದಿದ್ದರೆ ಅವಳು ಅವರನ್ನೆಲ್ಲ ಸಲೀಸಾಗಿ ಹಿಡಿತದಲ್ಲಿಟ್ಟುಕೊಳ್ಳುತ್ತಿದ್ದಳು.
  22. work one’s fingers to the $^1$bone.
See also 1finger
2finger ಹಿಂಗರ್‍
ಸಕರ್ಮಕ ಕ್ರಿಯಾಪದ
  1. ಬೆರಳುಗಳಿಂದ ಮುಟ್ಟು.
  2. ಬೆರಳುಗಳಿಂದ – ತಿರುಗಿಸು, ಆಡಿಸು.
  3. (ಲಂಚ ಮೊದಲಾದವುಗಳಿಗೆ) ಕೈಒಡ್ಡು; ಕೈಚಾಚು.
  4. (ಸಂಗೀತ) (ವಾದ್ಯವನ್ನು) ಬೆರಳುಗಳಿಂದ ನುಡಿಸು, ಬಾಜಿಸು.
  5. (ಸಂಗೀತ) ಕೃತಿಯನ್ನು ಬೆರಳುಗಳಿಂದ ನಿರ್ದಿಷ್ಟ ರೀತಿಯಲ್ಲಿ ನುಡಿಸು.
  6. (ಸಂಗೀತವನ್ನು) ಯಾವ ಬೆರಳುಗಳಿಂದ ನುಡಿಸಬೇಕೆಂಬುದನ್ನು ಗುರುತಿಸು.
  7. (ಅಮೆರಿಕನ್‍ ಪ್ರಯೋಗ, ಅಶಿಷ್ಟ) ಅಪರಾಧಿಗೆ
    1. ಮಾಹಿತಿಯನ್ನು ಒದಗಿಸು.
    2. ಬಲಿಯಾಗುವವನನ್ನು ಸೂಚಿಸು.
  8. (ಅಪರಾಧಿಯನ್ನು) ಪೊಲೀಸರಿಗೆ ಗುರುತಿಸಿ ತೋರಿಸು.