finder ಹೈಂಡರ್‍
ನಾಮವಾಚಕ
  1. ನೋಡುವವನು(ಳು); ನೋಡುವುದು; ಕಾಣುವವನು(ಳು).
  2. ಗ್ರಾಹಿ; ಪಡೆಯುವವನು(ಳು).
  3. ಗ್ರಾಹಿ; ತಿಳಿಯುವವನು(ಳು).
  4. ಕಂಡುಹಿಡಿಯುವವನು(ಳು); ಅನ್ವೇಷಕ.
  5. ಅನ್ವೇಷಕ; ಕಿರುದರ್ಶಕ; ನೋಡಬೇಕೆಂದಿರುವ ಕ್ಷೇತ್ರವನ್ನು ಯಾ ವಸ್ತುವನ್ನು ಮೊದಲು ಸ್ಥೂಲವಾಗಿ ಗುರುತಿಸಲು ದೊಡ್ಡ ದೂರದರ್ಶಕಕ್ಕೆ ಬಂಧಿಸಿರುವ ಸಣ್ಣ ದೂರದರ್ಶಕ.
  6. (ಸೂಕ್ಷ್ಮದರ್ಶಕದಲ್ಲೂ ಛಾಯಾಚಿತ್ರಗ್ರಾಹಕದಲ್ಲೂ ಇರುವ ಇದೇ ತೆರನ) ಅನ್ವೇಷಕ; ಬಿಂಬಗ್ರಾಹಕ; ಬಿಂಬವನ್ನು ಗ್ರಹಿಸುವ ಯಾ ನೋಡುವ ಸಾಧನ.
ಪದಗುಚ್ಛ

finders keepers (ಆಡುಮಾತು) ಸಿಕ್ಕಿದವರಿಗೆ ಸೀರುಂಡೆ; ಸಿಕ್ಕಿದವರಿಗೆ ದಕ್ಕುವುದು; ಯಾರ್ಯಾರಿಗೆ ಏನೇನು ಸಿಕ್ಕುತ್ತದೋ ಆಯಾ ವಸ್ತುವನ್ನು ಅವರೇ ಇಟ್ಟುಕೊಳ್ಳಬಹುದು.