See also 2fin
1fin ಹಿನ್‍
ನಾಮವಾಚಕ
  1. (ಪ್ರಾಣಿವಿಜ್ಞಾನ) (ಈಜು) ರೆಕ್ಕೆ; ಈನು, ತಿಮಿಂಗಿಲ, ಮೊದಲಾದ ಜಲಚರಗಳ ಚಲನೆಗೆ ಅವಶ್ಯವಾದ, ದೇಹದ ವಿವಿಧ ಭಾಗಗಳಲ್ಲಿರುವ ರೆಕ್ಕೆ: anal fin ಹಿಂಬದಿ ರೆಕ್ಕೆ. caudal fin ಬಾಲರೆಕ್ಕೆ. dorsal fin ಬೆನ್ನರೆಕ್ಕೆ. pectoral fin ಎದೆರೆಕ್ಕೆ. ventral fin ಹೊಟ್ಟೆರೆಕ್ಕೆ.
  2. ನೇಗಿಲ ಕುಳದ ಪಕ್ಕದಲ್ಲಿ ಹೊರಕ್ಕೆ ಚಾಚಿದ ಭಾಗ.
  3. ವಿಮಾನದ ಯಾ ಕ್ಷಿಪಣಿಯ (ಸ್ಥಿರತೆಗೆ ಅನುಕೂಲವಾಗಲು ಬೇರೆಬೇರೆ ಭಾಗದಲ್ಲಿ ಅಳವಡಿಸಲಾಗಿರುವ) ರೆಕ್ಕೆ.
  4. (ಅಶಿಷ್ಟ) ಕೈ; ತೋಳು; ಹಸ್ತ: tip us your fin ಕೈಕುಲುಕು.
  5. ಕಾಲು ರೆಕ್ಕೆ; ನೀರಿನಲ್ಲಿ ಮುಳುಗಿ ಈಜುವವನ (ಕಾಲಿಗೆ ಹಾಕಿಕೊಳ್ಳುವ, ರಬ್ಬರಿನ) ಈಜುರೆಕ್ಕೆ.
  6. ಉಷ್ಣವನ್ನು ವರ್ಗಾಯಿಸುವುದು, ಸುಧಾರಿಸುವುದು, ಮೊದಲಾದ ಉದ್ದೇಶಗಳಿಗಾಗಿ ಕೆಲವು ಸಾಧನಗಳಲ್ಲಿ ಅಳವಡಿಸುವ ಚಾಚು.
  7. ಹಿಂಚಾಚು; ಬಾಲ; ಮೋಟಾರುಕಾರುಗಳಿಗೆ ಜೋಡಿಸುವ, ಮುಖ್ಯವಾಗಿ ಹಿಂಭಾಗದಲ್ಲಿ ಚಾಚಿಕೊಂಡಿರುವ ಭಾಗ: tail fin (ಮೋಟಾರಿನ) ಹಿಂಚಾಚು; ಬಾಲ.
See also 1fin
2fin ಹಿನ್‍
ಸಕರ್ಮಕ ಕ್ರಿಯಾಪದ
  1. (ಈಜು) ರೆಕ್ಕೆಗಳನ್ನು – ತೊಡಿಸು, ಹಾಕು, ಜೋಡಿಸು, ಅಳವಡಿಸು.
  2. ರೆಕ್ಕೆಯಂಥ ಭಾಗಗಳನ್ನು ಅಳವಡಿಸು.
ಅಕರ್ಮಕ ಕ್ರಿಯಾಪದ

(ನೀರಿನಲ್ಲಿ) ಮುಳುಗಿ ಈಜು; ನೀರೊಳಗೆ ಈಜು.