See also 2film
1film ಹಿಲ್ಮ್‍
ನಾಮವಾಚಕ
  1. ಪೊರೆ; ತೆಳುವಾದ ಚರ್ಮ, ಫಲಕ, ಹೊದಿಕೆ, ಪರದೆ, ಪದರ, ಮೊದಲಾದವು: film of dust ಧೂಳಿನ ಪರದೆ. a film of oil on the water ನೀರಿನ ಮೇಲೆ ಎಣ್ಣೆಯ ಪೊರೆ.
  2. (ಛಾಯಾಚಿತ್ರೀಕರಣದಲ್ಲಿ) ಹಿಲಮು:
    1. ಬೆಳಕಿಗೆ ಸೂಕ್ಷ್ಮ ಪ್ರತಿಕ್ರಿಯೆ ತೋರುವ, ಎಮಲ್ಷನ್ನನ್ನು ಸವರಿರುವ, ಸೆಲುಲಾಯಿಡ್‍ ಯಾ ಇನ್ನಾವುದೇ ಪ್ಲಾಸ್ಟಿಕ್‍ ಸುರುಳಿಯ ಹಾಳೆ.
    2. ಅಂತಹ ಎಮಲ್ಷನ್ನಿನಿಂದ ಮಾಡಿದ ಸುರುಳಿ ಯಾ ಹಾಳೆ.
    3. (ಚಲಚ್ಚಿತ್ರ ತಯಾರಿಕೆಗೆ ಬಳಸುವ) ಹಿಲಮು ಸುರುಳಿ.
    4. ಚಲನಚಿತ್ರ; ಸಿನಿಮಾ: film star ಸಿನಿಮಾ ತಾರೆ.
  3. ಕಣ್ಣಿನ – ಮಂಜು, ಮಬ್ಬು, ಮಸುಕು.
  4. ಕಾವಳ; ಮಂಜು; ಮಬ್ಬು.
  5. ಸೂಕ್ಷ್ಮದಾರ; ತೆಳು ತಂತು.
  6. (ಬಹುವಚನದಲ್ಲಿ) ಸಿನಿಮಾ ಉದ್ಯಮ; ಚಲನಚಿತ್ರೋದ್ಯಮ.
ಪದಗುಚ್ಛ
  1. a film premiere ಸಿನಿಮಾಚಿತ್ರದ – ಪ್ರಥಮ ಪ್ರದರ್ಶನ, ಮೊದಲನೇ ಆಟ.
  2. film test ಸಿನಿಮಾ ಚಿತ್ರಪರೀಕ್ಷೆ; ಸಿನಿಮಾ ನಟನಾಗಲಿರುವವನ ಛಾಯಾಚಿತ್ರದ ಪರೀಕ್ಷೆ.
  3. the films ಸಿನಿಮಾ ಪ್ರದರ್ಶನ.
See also 1film
2film ಹಿಲ್ಮ್‍
ಸಕರ್ಮಕ ಕ್ರಿಯಾಪದ
  1. ಪೊರೆ, ತೆಳುಪದರ, ತೆಳು ಹೊದಿಕೆ, ಮೊದಲಾದವುಗಳಿಂದ ಮುಚ್ಚು.
  2. ಚಲನಚಿತ್ರಕ್ಕಾಗಿ (ದೃಶ್ಯ ಮೊದಲಾದವನ್ನು) ಚಿತ್ರೀಕರಿಸು; ಛಾಯಾಗ್ರಹಿಸು; ಚಲಚ್ಚಿತ್ರ – ತೆಗೆ, ತಯಾರಿಸು.
  3. (ಪುಸ್ತಕ ಮೊದಲಾದವುಗಳ) ಚಲನಚಿತ್ರ – ತಯಾರಿಸು, ಮಾಡು; ಚಿತ್ರೀಕರಿಸು.
ಅಕರ್ಮಕ ಕ್ರಿಯಾಪದ
  1. ಪೊರೆ, ತೆಳುಪದರ, ಮೊದಲಾದವುಗಳಿಂದ ಮುಚ್ಚಿಕೊ.
  2. ಚಿತ್ರೀಕೃತವಾಗು; ಚಲನಚಿತ್ರವಾಗುವಂತಿರು: this story films easily ಈ ಕಥೆ ಸುಲಭವಾಗಿ ಚಿತ್ರೀಕೃತವಾಗುವುದು.
  3. ಚಲನಚಿತ್ರ ತೆಗೆ.
  4. ಚಲನಚಿತ್ರೋದ್ಯಮದಲ್ಲಿ ತೊಡಗಿರು.