See also 2fill
1fill ಹಿಲ್‍
ಸಕರ್ಮಕ ಕ್ರಿಯಾಪದ
  1. ತುಂಬು; ತುಂಬಿಸು; ಭರ್ತಿ ಮಾಡು.
  2. ಹೆಚ್ಚಾಗಿ ಶೇಖರಿಸಿಡು; ಕೂಡಹಾಕು; ಸಂಚಯಿಸು; ದಾಸ್ತಾನು ಮಾಡು.
  3. ತುಂಬಿಕೊ; ವ್ಯಾಪಿಸು; ಹರಡು; ಆವರಿಸು: the odour filled the room ವಾಸನೆ ಕೊಠಡಿಯಲ್ಲೆಲ್ಲಾ ಹರಡಿತು, ಕೊಠಡಿಯನ್ನೆಲ್ಲ ಆವರಿಸಿತು.
  4. (ದಂತವೈದ್ಯ) (ಟೊಳ್ಳು ಹಲ್ಲನ್ನು ಹಲ್ಲಿನ ಸಂದುಗಳನ್ನು ಚಿನ್ನ, ಸಿಮೆಂಟು, ಮೊದಲಾದವುಗಳಿಂದ) ತುಂಬು; ತುಂಬಿಸು.
  5. (ಮುಖ್ಯವಾಗಿ ವಿಶೇಷ ಆಹಾರವಸ್ತುಗಳಿಂದ) ಹೊಟ್ಟೆ ತುಂಬಿಸು; ತೃಪ್ತಿಪಡಿಸು; ತಣಿಸು: the roast beef filled the diners ಹುರಿದ ಗೋಮಾಂಸ ಊಟಮಾಡಿದವರನ್ನು ತಣಿಸಿತು.
  6. ಹುದ್ದೆ – ಹಿಡಿದಿರು, ವಹಿಸಿರು; ಹುದ್ದೆಯಲ್ಲಿ ಇರು.
  7. (ಹುದ್ದೆಯ, ಅಧಿಕಾರದ) ಕೆಲಸ ನೆರವೇರಿಸು; ಕಾರ್ಯನಡೆಸು; ಕರ್ತವ್ಯ ನಿರ್ವಹಿಸು.
  8. (ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂಥ ಬೇಡಿಕೆ, ಅಪ್ಪಣೆ, ಆಜ್ಞೆ, ಸೂಚನೆ, ಮೊದಲಾದವುಗಳನ್ನು) ನಡೆಸು; ನೆರವೇರಿಸು; ಕಾರ್ಯಗತ ಮಾಡು.
  9. (ಬಿಡುಹೊತ್ತನ್ನು) ಕಳೆಯಲು, ತುಂಬಲು – ನೆರವಾಗು ಯಾ (ಬಿಡುಹೊತ್ತನ್ನು) ತುಂಬಿಸು: amusements which fill a vacant hour ಬಿಡುಹೊತ್ತನ್ನು ಕಳೆಯಲು ನೆರವಾಗುವ ಮನರಂಜನೆಗಳು.
  10. (ವ್ಯಕ್ತಿಯನ್ನು ನೇಮಕಮಾಡಿ ಖಾಲಿ ಇರುವ ಸ್ಥಾನವನ್ನು) ತುಂಬು; ಭರ್ತಿಗೊಳಿಸು; ಭರ್ತಿಮಾಡು.
  11. (ಸಾಮಾನ್ಯವಾಗಿ ಭೂತಕೃದಂತದಲ್ಲಿ) ಬೆರಕೆಮಾಡು.
  12. (ಪೋಕರ್‍ ಮೊದಲಾದ ಆಟಗಳಲ್ಲಿ) ಬೇಕಾದ ಎಲೆಗಳನ್ನು ಎಳೆದುಕೊಂಡು (ಕೈ) ತುಂಬಿಸು, ಪೂರ್ತಿಮಾಡು.
ಅಕರ್ಮಕ ಕ್ರಿಯಾಪದ
  1. ತುಂಬು; ತುಂಬಿಹೋಗು; ಭರ್ತಿಯಾಗು: the hall filled rapidly ಸಭಾಂಗಣ ಬಹುಬೇಗ ತುಂಬಿ ಹೋಯಿತು.
  2. (ಹಾಯಿಯ ವಿಷಯದಲ್ಲಿ) ಗಾಳಿಯಿಂದ – ಉಬ್ಬು, ತುಂಬು.
  3. (ಒಂದು ಬಟ್ಟಲು ಅಥವಾ ಯಾವುದೇ ಪಾತ್ರವು) ತುಂಬು; ತುಂಬಿಕೊ; ಭರ್ತಿಯಾಗು.
ಪದಗುಚ್ಛ
  1. fill in
    1. (ಪೊಟರೆ, ರೂಪರೇಖೆ, ಮೊದಲಾದವುಗಳನ್ನು) ತುಂಬು; ಪೂರ್ತಿಮಾಡು: ಭರ್ತಿಮಾಡು.
    2. (ಪೂರ್ತಿಯಾಗುವ ದಸ್ತೈವಜು, ಖಾಲಿ ಚೆಕ್ಕು, ಮೊದಲಾದವುಗಳಲ್ಲಿ ಪೂರ್ತಿಮಾಡದೆ) ಬಿಟ್ಟಿರುವ ಅಂಶಗಳನ್ನು ತುಂಬು, ಪೂರ್ತಿ ಮಾಡು.
    3. ಕೆಲಸ ಇಲ್ಲದಿರುವಾಗ ಏನಾದರೂ ಕೆಲಸಮಾಡು: nurses usefully filling in time while they are off duty ಕೆಲಸದ ಮೇಲೆ ಇಲ್ಲದೆ ಇರುವಾಗ ದಾದಿಯರು ಏನಾದರೂ ಉಪಯುಕ್ತ ಕೆಲಸ ಮಾಡುತ್ತ.
    4. (ಅಮೆರಿಕನ್‍ ಪ್ರಯೋಗ, ಆಡುಮಾತು) (ವ್ಯಕ್ತಿಗೆ) ಆವಶ್ಯಕವಾದ ಯಾ ಹೆಚ್ಚಿನ ಮಾಹಿತಿಯನ್ನು ಕೊಡು.
    5. ಬದಲಿಯಾಗಿ ಕೆಲಸಮಾಡು; ಯಾವುದೇ ಖಾಲಿ ಹುದ್ದೆಯನ್ನು ತಾತ್ಕಾಲಿಕವಾಗಿ ತುಂಬು.
  2. fill out
    1. (ತಕ್ಕ ಮಿತಿಯವರೆಗೆ) ಹರಡು; ವಿಸ್ತರಿಸು; ವಿಸ್ತಾರವಾಗು; ಉಬ್ಬು; ಉಬ್ಬಿಸು; ಹಿಗ್ಗು; ಹಿಗ್ಗಿಸು; ಮೈತುಂಬಿಕೊ: the children have begun to fill out since I saw them last ನಾನು ಹಿಂದೆ ನೋಡಿದ್ದಕ್ಕಿಂತ ಈಗ ಮಕ್ಕಳು ಮೈತುಂಬಿಕೊಂಡಿದ್ದಾರೆ.
    2. (ಅಮೆರಿಕನ್‍ ಪ್ರಯೋಗ) (ಪೂರ್ತಿಯಾಗದ ದಸ್ತೈವಜು ಮೊದಲಾದವುಗಳಲ್ಲಿ) ಬಿಟ್ಟಿರುವ ಅಂಶಗಳನ್ನು ತುಂಬು.
  3. fill up
    1. (ಖಾಲಿ ಇರುವ ಸ್ಥಳಗಳನ್ನು) ಭರ್ತಿಮಾಡು; ಪೂರ್ತಿಮಾಡು; ಭರ್ತಿ ತುಂಬು.
    2. ನ್ಯೂನತೆಗಳನ್ನು ತುಂಬು, ಪರಿಹರಿಸು.
    3. (ಕೊಳ ಮೊದಲಾದವನ್ನು) ಮುಚ್ಚಿಬಿಡು.
    4. ಪೂರ್ತಿಯಾಗಿ, ತುಂಬ – ಬೆಳೆ.
    5. (ಪೂರ್ತಿಯಾದ ದಸ್ತೈವಜು ಮೊದಲಾದವುಗಳಲ್ಲಿ) ಖಾಲಿ ತುಂಬು; ಬಿಟ್ಟಿರುವ ಅಂಶಗಳನ್ನು ತುಂಬು.
    6. ಮೋಟಾರು ಕಾರಿನ ಟ್ಯಾಂಕಿಗೆ ಪೆಟೊಲು ತುಂಬು.
    7. ಭರ್ತಿಯಾಗು; ತುಂಬು.
  4. sails fill ಹಾಯಿಪಟಗಳು ಗಾಳಿಯಿಂದ ಉಬ್ಬುತ್ತವೆ.
ನುಡಿಗಟ್ಟು

fill the bill

  1. (ಅಮೆರಿಕನ್‍ ಪ್ರಯೋಗ) ಅಗತ್ಯವಾದುದನ್ನು, ಆವಶ್ಯಕವಾದುದನ್ನು – ಮಾಡು.
  2. ಸಾಕಾಗಿರು; ಆವಶ್ಯಕವಾದಷ್ಟು ಇರು.
See also 1fill
2fill ಹಿಲ್‍
ನಾಮವಾಚಕ
  1. ಭರ್ತಿಯಾಗುವಷ್ಟು, ತೃಪ್ತಿಯಾಗುವಷ್ಟು, ತಣಿಸುವಷ್ಟು – ಆಹಾರ, ಪಾನ, ಇತ್ಯಾದಿ: have one’s fill ಹೊಟ್ಟೆತುಂಬ ಊಟಮಾಡು.
  2. ತುಂಬು; ಭರ್ತಿ; ಯಾವುದನ್ನಾದರೂ ತುಂಬಲು ಸಾಕಾಗುವಷ್ಟು: a fill of tobacco ಒಂದು ತುಂಬು ತಂಬಾಕು.
  3. ಭರ್ತಿ; ಹಳ್ಳ ಮೊದಲಾದವನ್ನು ಮುಚ್ಚಲು ಬೇಕಾದ ಮಣ್ಣು ಮೊದಲಾದ ವಸ್ತು.