See also 2filibuster
1filibuster ಹಿಲಿಬಸರ್‍
ನಾಮವಾಚಕ
  1. ದುರಾಕ್ರಮಣಕಾರಿ; ದುಂಡಾವರ್ತಿ ನಡೆಸುವವ; ಕಾನೂನಿಗೆ ವಿರುದ್ಧವಾಗಿ ಬೇರೊಂದು ದೇಶದ ಮೇಲೆ ಯುದ್ಧಕ್ರಮ ಜರುಗಿಸುವವನು.
  2. (ಶಾಸನಸಭೆಗಳಲ್ಲಿ) ವಿಘ್ನಕಾರಿ; ತಡೆಗಾರ; ಮುಖ್ಯವಾಗಿ ದೀರ್ಘವಾಗಿ ಮಾತನಾಡಿ ಕಲಾಪಕ್ಕೆ ತಡೆಯೊಡ್ಡುವವನು ಯಾ ತಡೆಯೊಡ್ಡುವುದು.
ಅಕರ್ಮಕ ಕ್ರಿಯಾಪದ
  1. ದುರಾಕ್ರಮಣಮಾಡು; ದುಂಡಾವರ್ತಿ ನಡೆಸು; ಬೇರೊಂದು ದೇಶದ ಮೇಲೆ ಕಾನೂನಿಗೆ ವಿರುದ್ಧವಾಗಿ ಯುದ್ಧ ನಡೆಸು; ನ್ಯಾಯವಿಲ್ಲದೆ ಸ್ವಾರ್ಥಕ್ಕಾಗಿ ಯುದ್ಧಹೂಡು ( ಸಕರ್ಮಕ ಕ್ರಿಯಾಪದ ಸಹ).
  2. (ಶಾಸನಸಭೆಗಳಲ್ಲಿ) ದೀರ್ಘವಾಗಿ ಮಾತನಾಡಿ ತಡೆಯೊಡ್ಡು, ಅಡ್ಡಿಪಡಿಸು, ವಿಘ್ನಮಾಡು ( ಸಕರ್ಮಕ ಕ್ರಿಯಾಪದ ಸಹ).