filiation ಹಿಲಿಏಷನ್‍
ನಾಮವಾಚಕ
  1. ಪುತ್ರತ್ವ ಯಾ ಪುತ್ರೀತ್ವ; ಅಪತ್ಯತ್ವ; ಒಬ್ಬನ ಮಗಳು ಯಾ ಮಗ ಆಗಿರುವುದು.
  2. ಅಪತ್ಯಸಂಬಂಧ; ತಾಯಿ ಯಾ ತಂದೆಗೂ ಮಗುವಿಗೂ ಇರುವ ನಂಟು, ಸಂಬಂಧ.
  3. ಉತ್ಪತ್ತಿ; ಸಂತತಿ; ಹುಟ್ಟು.
  4. (ಒಂದು ಸಂಘದ ಯಾ ಭಾಷೆಯ) ಶಾಖೆ; ಕವಲು.
  5. ವಂಶಾನುಕ್ರಮ; ವಂಶಾನುಸರಣಿ; ವಂಶಸಂಬಂಧ; ವಂಶವೃಕ್ಷ.
  6. ವಂಶಾನುಕ್ರಮ ನಿರ್ಣಯ; ವಂಶಾನುಕ್ರಮವನ್ನು ಗುರುತಿಸುವುದು, ನಿರ್ಧರಿಸುವುದು: a scholar’s filiation of manuscripts ವಿದ್ವಾಂಸನು ಕೈಗೊಂಡ ಹಸ್ತಪ್ರತಿಗಳ ಸಂಬಂಧಾನುಕ್ರಮ (ನಿರ್ಣಯ).