See also 2file  3file  4file  5file  6file
1file ಹೈಲ್‍
ನಾಮವಾಚಕ
  1. ಅರ; ಅರ್ನ. Figure: file
  2. (ಅಶಿಷ್ಟ) ಉಪಾಯಗಾರ; ತಂತ್ರಿ; ನುಣುಚಿಗ: old file ನುರಿತ ತಂತ್ರಿ; ಪಕ್ಕಾತಂತ್ರಿ; deep file ಪಕ್ಕಾ ತಂತ್ರಿ.
ನುಡಿಗಟ್ಟು
  1. bite file ವ್ಯರ್ಥವಾದ ಕೆಲಸ ಮಾಡು; ನಿಷ್ಫಲವಾಗಿ ದುಡಿ.
  2. gnaw file = ನುಡಿಗಟ್ಟು \((1)\).
See also 1file  3file  4file  5file  6file
2file ಹೈಲ್‍
ಸಕರ್ಮಕ ಕ್ರಿಯಾಪದ
  1. ಅರದಿಂದ – ಉಜ್ಜು, ನುಣುಪಿಸು, ಉಜ್ಜಿ ನಯಮಾಡು.
  2. (ಮುಖ್ಯವಾಗಿ ಸಾಹಿತ್ಯ ಕೃತಿಯನ್ನು) ತಿದ್ದಿ – ನಯಮಾಡು, ಉತ್ತಮಗೊಳಿಸು.
ಪದಗುಚ್ಛ

file away (ಒರಟುಮೈ ಮೊದಲಾದವನ್ನು)(ಅರದಿಂದ) ಉಜ್ಜಿಹಾಕು; ತೆಗೆದುಬಿಡು.

See also 1file  2file  4file  5file  6file
3file ಹೈಲ್‍
ನಾಮವಾಚಕ
  1. (ಕಾಗದ ಪತ್ರಗಳನ್ನು ಪೋಣಿಸಿಡುವ) ಚೂಪುತುದಿಯ ಸೆಟೆದ ತಂತಿ.
  2. ಹೈಲು:
    1. ಪತ್ರದ ಕಟ್ಟು; ಕಡತ ಕಟ್ಟು: (ಬೇಕಾದಾಗ ನೋಡಲು ಸಿಗುವಂತೆ ಕಾಗದಪತ್ರಗಳನ್ನು) ಒಂದು ಕ್ರಮದಲ್ಲಿ ಬಂಧಿಸಿಡುವ ಸಾಧನ.
    2. ಕಡತ: (ಮುಖ್ಯವಾಗಿ ನ್ಯಾಯಾಲಯದಲ್ಲಿ, ಕಚೇರಿಯಲ್ಲಿ ಒಂದು ವಿಷಯಕ್ಕೆ, ಒಂದು ಮೊಕದ್ದಮೆಗೆ ಸಂಬಂಧಿಸಿದ) ಜೋಡಿಸಿಟ್ಟ ಕಾಗದಪತ್ರದ ಕಟ್ಟು.
    3. ಕ್ರಮವಾಗಿ ಜೋಡಿಸಿಟ್ಟ (ಯಾವುದೇ ವೃತ್ತಪತ್ರಿಕೆಯ) ಸಂಚಿಕೆಗಳ ಕಟ್ಟು.
    4. (ಕಂಪ್ಯೂಟರ್‍) ಹೈಲು; ಒಂದು ಹೆಸರಿನಡಿ ಸಂಗ್ರಹಿಸಿಟ್ಟಿರುವ, ಬೇಕಾದಾಗ ಬಳಸಿಕೊಳ್ಳಬಹುದಾದ ಸಾಮಾನ್ಯವಾಗಿ ಪರಸ್ಪರ ಸಂಬಂಧವುಳ್ಳ, ದತ್ತಾಂಶಗಳು.
See also 1file  2file  3file  5file  6file
4file ಹೈಲ್‍
ಸಕರ್ಮಕ ಕ್ರಿಯಾಪದ
  1. (ಕಾಗದಪತ್ರಗಳನ್ನು) ಕಟ್ಟಿನಲ್ಲಿ, ದಫ್ತರದಲ್ಲಿ, ಯಾ ಪತ್ರಕೋಶದಲ್ಲಿ ಇಡು; ಕಟ್ಟಿಗೆ ಯಾ ಕಡತಕೋಶಕ್ಕೆ ಸೇರಿಸು; ಹೈಲುಮಾಡು.
  2. ಮೊಕದ್ದಮೆ ದಾಖಲು ಮಾಡು: to file a lawsuit ದಾವಾಹಾಕು.
  3. (ಪೇಟೆಂಟು, ವಿವಾಹ ವಿಚ್ಛೇದನ, ಮೊದಲಾದವುಗಳಿಗಾಗಿ ಸೂಕ್ತ ಅಧಿಕಾರಿಗಳಿಗೆ) ಅರ್ಜಿ ಸಲ್ಲಿಸು.
  4. (ವರದಿಗಾರನ ವಿಷಯದಲ್ಲಿ) (ಸುದ್ದಿ, ಮಾಹಿತಿ, ಕಥೆ, ಮೊದಲಾದವನ್ನು) ಪತ್ರಿಕೆಗೆ ಕಳುಹಿಸು.
See also 1file  2file  3file  4file  6file
5file ಹೈಲ್‍
ನಾಮವಾಚಕ
  1. (ಸೈನ್ಯ) (ಒಬ್ಬರ ಹಿಂದೆ ಒಬ್ಬರಂತೆ ನಿಂತಿರುವ) ಸೈನಿಕರ – ಸಾಲು, ಪಂಕ್ತಿ.
  2. (ಈಗ ಸಾಮಾನ್ಯವಾಗಿ ಇಬ್ಬರು) ಸೈನಿಕರ – ಚಿಕ್ಕ ತಂಡ, ಜೋಡಿ.
  3. (ಒಂದರ ಹಿಂದೊಂದರಂತೆ ಯಾ ಒಬ್ಬನ ಹಿಂದೊಬ್ಬನಂತೆ ಇರುವ) ವಸ್ತುಗಳ, ಮನುಷ್ಯರ – ಸಾಲು, ಪಂಕ್ತಿ.
  4. (ಚದುರಂಗ) ಉದ್ದಸಾಲು; ಒಬ್ಬ ಆಟಗಾರನ ಕಡೆಯಿಂದ ಇನ್ನೊಬ್ಬನ ಕಡೆಗೆ ಹೋಗುವಂತಿರುವ ಮನೆಗಳ ಸಾಲು.
ಪದಗುಚ್ಛ
  1. a file of men ಒಂದು ಉದ್ದೇಶಕ್ಕಾಗಿ ಹೋಗಲು ನಿಯಮಿತರಾದ ಇಬ್ಬರು.
  2. Indian file ಒಬ್ಬನ ಹಿಂದೆ ಒಬ್ಬನಂತೆ ನಡೆದುಹೋಗುವ ಒಂದೇ ಸಾಲು, ಏಕಪಂಕ್ತಿ.
  3. in file ಒಬ್ಬನ ಹಿಂದೆ ಒಬ್ಬನಂತೆ ಎರಡು ಸಾಲುಗಳಾಗಿ.
  4. single file= ಪದಗುಚ್ಛ \((2)\).
See also 1file  2file  3file  4file  5file
6file ಹೈಲ್‍
ಸಕರ್ಮಕ ಕ್ರಿಯಾಪದ

ಒಬ್ಬನ ಹಿಂದೆ ಒಬ್ಬನಂತೆ ಯಾ ಉದ್ದಸಾಲುಗಳಲ್ಲಿ ಯಾ ಸಾಲಾಗಿ ಹೋಗುವಂತೆ (ಸಿಪಾಯಿಗಳಿಗೆ) ಆಜ್ಞೆ ಮಾಡು.

ಅಕರ್ಮಕ ಕ್ರಿಯಾಪದ

ಉದ್ದಸಾಲಿನಲ್ಲಿ ನಡೆ; ಒಬ್ಬನ ಹಿಂದೆ ಒಬ್ಬನಂತೆ ಸಾಲಾಗಿ ನಡೆ.

ಪದಗುಚ್ಛ

file away (or off) ಸಾಲುಸಾಲಾಗಿ ಹೋಗು; ಪಂಕ್ತಿಯಲ್ಲಿ ನಡೆ.