filament ಹಿಲಮಂಟ್‍
ನಾಮವಾಚಕ
  1. ನಾರು; ತಂತು; ಎಳೆ; ನವಿರಾದ ದಾರದಂತಿರುವ ಯಾವುದೇ ಕಾಯ.
  2. ಫಿಲಮೆಂಟು; ವಿದ್ಯುದ್ದೀಪ ಯಾ ರೇಡಿಯೋ ಕವಾಟಗಳಲ್ಲಿರುವ ವಿದ್ಯುತ್ತಿನಿಂದ ಕಾದು ಜ್ವಲಿಸುವ, ಸುಲಭವಾಗಿ ದ್ರವಿಸದ ವಿದ್ಯುದ್ವಾಹಕದಿಂದ ತಯಾರಿಸಿದ ತಂತಿ.
  3. ಧಾರೆ:
    1. ಅನಿಲ, ಬೆಳಕು, ಮೊದಲಾದವುಗಳ ಪ್ರವಾಹದ ಕಾಲ್ಪನಿಕ ಭಾಗ.
    2. ಒಂದರ ಹಿಂದೊಂದು ಸಾಗಿಹೋಗುತ್ತಿರುವ ಕಣಗಳ ಸಾಲು.
  4. (ಸಸ್ಯವಿಜ್ಞಾನ) ತಂತು ಪರಾಗಕೋಶಕ್ಕೆ ಆಸರೆಯಾಗಿರುವ ಪುಂಕೇಸರದ ಭಾಗ.