figurative ಹಿಗ್ಯು(ಗ)ರಟಿವ್‍
ಗುಣವಾಚಕ
  1. ಸಾಂಕೇತಿಕ.
  2. ಪ್ರಾತಿನಿಧಿಕ – ನಮೂನೆಯ, ಮಾದರಿಯ.
  3. ಸಚಿತ್ರ ಯಾ ಸರೂಪ; ಮೂರ್ತ; ಚಿತ್ರಕಲೆ ಯಾ ಶಿಲ್ಪದಲ್ಲಿ ರೂಪದ, ಆಕೃತಿಯ, ಯಾ ಸಾದೃಶ್ಯದ ಮೂಲಕ ನಿರೂಪಿಸಿದ.
  4. ಔಪಚಾರಿಕ; ಲಾಕ್ಷಣಿಕ; ಆಲಂಕಾರಿಕ; ಅಕ್ಷರಾರ್ಥವಲ್ಲದ; ಕೇವಲ ಶಬ್ದಾರ್ಥಕವಾಗಿರದೆ ಆಲಂಕಾರಿಕವಾಗಿ ಹೇಳಿದ: the figurative body of Christ that is holy church ಏಸುವಿನ ದೇಹವೆಂದು ಆಲಂಕಾರಿಕವಾಗಿ ಹೇಳುವ ಆ ಪವಿತ್ರ ಚರ್ಚು.
  5. (ಭಾಷೆಯ ವಿಷಯದಲ್ಲಿ) ಅಲಂಕಾರಮಯ; ಅಲಂಕಾರಗಳಿಂದ ತುಂಬಿದ.
  6. (ಭಾಷೆಯ ವಿಷಯದಲ್ಲಿ) ಅಲಂಕಾರಾಸಕ್ತ; ಅಲಂಕಾರಗಳನ್ನು ಬಳಸುವುದರಲ್ಲಿ ಅನುರಾಗವುಳ್ಳ.