See also 2fighting
1fighting ಹೈಟಿಂಗ್‍
ಗುಣವಾಚಕ
  1. ಕದನ(ದ); ಯುದ್ಧ(ದ); ಯುದ್ಧಕ್ಕಾಗಿ ರೂಪಿಸಿದ: a fighting ship ಯುದ್ಧನೌಕೆ; ಕದನ(ದ) ಹಡಗು.
  2. ಕಾದಾಡಬಲ್ಲ; ಕಾದಾಟಕ್ಕೆ, ಸೆಣಸಾಟಕ್ಕೆ ಯೋಗ್ಯವಾದ: a boxer in fighting condition ಕಾದಾಡುವ ಸ್ಥಿತಿಯಲ್ಲಿರುವ ಮುಷ್ಟಿಮಲ್ಲ.
  3. ಕಾದಾಡುವ – ಪ್ರವೃತ್ತಿಯ, ಸ್ವಭಾವದ; ಜಗಳಗಂಟ.
See also 1fighting
2fighting ಹೈಟಿಂಗ್‍
ನಾಮವಾಚಕ
  1. (ಎದುರಾಳಿಯೊಡನೆ, ಪ್ರತಿಕಕ್ಷಿಯೊಡನೆ) ವ್ಯಾಜ್ಯ ಮಾಡುವುದು; ಜಗಳ ಮಾಡುವುದು.
  2. ರಣರಂಗದಲ್ಲಿ ಕಾದಾಡುವುದು.
  3. ಮುಷ್ಟಿಯುದ್ಧ ಮಾಡುವುದು.
  4. (ಹುಂಜಗಳನ್ನು, ನಾಯಿಗಳನ್ನು) ಕಾದಾಟಕ್ಕೆ ಬಿಡುವುದು.
  5. (ಸೈನ್ಯ, ಹಡಗು, ಮೊದಲಾದವನ್ನು) ಯುದ್ಧದಲ್ಲಿ ಹೂಡುವುದು, ನಡೆಸುವುದು.
  6. ಕಾದಾಟ; ಹೋರಾಟ; ಯುದ್ಧ.
  7. ಜಗಳ; ವ್ಯಾಜ್ಯ; ಹೊಡೆದಾಟ; ಬಡಿದಾಟ.
ಪದಗುಚ್ಛ

in fighting trim (ನೌಕೆಯ ವಿಷಯದಲ್ಲಿ, ರೂಪಕವಾಗಿ ಸಹ) ಕದನಕ್ಕೆ ಸಿದ್ಧವಾಗಿ; ಹೋರಾಟದ ಸಜ್ಜಿನಲ್ಲಿ.