See also 2fig  3fig
1fig ಹಿಗ್‍
ನಾಮವಾಚಕ
  1. ಅಂಜೂರ; ಅಂಜೂರದ ಮರ ಯಾ ಅದರ ಹಣ್ಣು.
  2. ಕೆಲಸಕ್ಕೆ ಬಾರದ್ದು; ಬೆಲೆಯಿಲ್ಲದ್ದು; ಒಂದು ಕಡ್ಡಿಗಿಂತ ಕಡೆಯಾದದ್ದು; ತೃಣಸಮಾನವಾದದ್ದು: don’t care a fig for ತೃಣಮೂಲವೂ ಲೆಕ್ಕಿಸುವುದಿಲ್ಲ; ಒಂದು ಹುಲ್ಲುಕಡ್ಡಿಗೂ ಕಡೆ. a fig for ...! ತೃಣಸಮಾನ! ಹುಲ್ಲುಕಡ್ಡಿ ಸಮಾನ!
ಪದಗುಚ್ಛ
  1. dried figs ಒಣ ಅಂಜೂರ.
  2. green figs ಹಸಿ ಅಂಜೂರ.
  3. pulled figs ಕೈಯಿಂದ ಆರಿಸಿದ ಉತ್ತಮ ದರ್ಜೆಯ ತುರ್ಕಿ ಅಂಜೂರ.
ನುಡಿಗಟ್ಟು

under (one’s) vine and fig-tree ಮನೆಯಲ್ಲಿ ನೆಮ್ಮದಿಯಾಗಿದ್ದುಕೊಂಡು.

See also 1fig  3fig
2fig ಹಿಗ್‍
ನಾಮವಾಚಕ
  1. ಉಡುಪು; ಉಡಿಗೆ; ಉಡಿಗೆ ತೊಡಿಗೆಗಳು; ಸಜ್ಜು: in full fig ಸಂಪೂರ್ಣ ಉಡಿಗೆತೊಡಿಗೆಯಲ್ಲಿ; ಸಂಪೂರ್ಣ ಸಜ್ಜಿನಲ್ಲಿ.
  2. ಸ್ಥಿತಿ; ರೂಪ: in good fig ಸರಿಯಾದ ಸ್ಥಿತಿಯಲ್ಲಿ.
See also 1fig  2fig
3fig ಹಿಗ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ figging, ಭೂತರೂಪ ಮತ್ತು ಭೂತಕೃದಂತ figged).

ಹುರುಪುಕೊಡು; ಚುರುಕುಗೊಳಿಸು; ಗೆಲುವಾಗಿಸು.

ಪದಗುಚ್ಛ
  1. fig out (or up) a horse ಕುದುರೆಯನ್ನು ಚುರುಕುಗೊಳಿಸು; ಅದಕ್ಕೆ ಹುರುಪು – ಕೊಡು, ಮಾಡು.
  2. fig out (person) (ಒಬ್ಬನನ್ನು) ಸಿಂಗರಿಸು.