See also 2fifth
1fifth ಹಿಹ್ತ್‍
ಗುಣವಾಚಕ

ಐದನೆಯ; ಪಂಚಮ: fifth part (ಯಾವುದರದೇ) ಐದನೆಯ ಒಂದು ಭಾಗ.

ನುಡಿಗಟ್ಟು

smite under the fifth rib (ಪ್ರಾಚೀನ ಪ್ರಯೋಗ) ಕೊಲ್ಲು; ಸಾಯಿಸು.

See also 1fifth
2fifth ಹಿಹ್ತ್‍
ನಾಮವಾಚಕ
  1. ಪಂಚಮ:
    1. ಐದನೆಯ ಭಾಗ; ಐದು ಸಮಭಾಗಗಳಲ್ಲಿ ಒಂದು.
    2. ಐದನೆಯ ವಸ್ತು ಮೊದಲಾದವು.
  2. (ಸಂಗೀತ) ಪಂಚಮಾವಧಿ; ಐದು ವರ್ಣಾನುಕ್ರಮ ಸ್ವರಗಳುಳ್ಳ ಅಂತರದ ಅವಧಿ.
  3. (ಸಂಗೀತ) ಪಂಚಮ; ಇಂಥ ಪ್ರತ್ಯೇಕಿತ ಸ್ವರಗಳ ಸ್ವರಮೈತ್ರಿ.
  4. (ಬಹುವಚನದಲ್ಲಿ) ಐದನೇ ದರ್ಜೆಯ ಪದಾರ್ಥ: butter fifths ಐದನೇ ದರ್ಜೆಯ ಬೆಣ್ಣೆ.
  5. (ಅಮೆರಿಕನ್‍ ಪ್ರಯೋಗ, ಆಡುಮಾತು)
    1. ಒಂದು ಗ್ಯಾಲನ್ನಿನ ಐದನೆಯ ಒಂದು ಭಾಗದಷ್ಟು ಮದ್ಯ.
    2. ಅಷ್ಟು ಮದ್ಯವಿರುವ ಸೀಸೆ.
ಪದಗುಚ್ಛ
  1. fifth day ಗುರುವಾರ.
  2. Fifth Monarchy (ಬೈಬಲಿನ ಡೇನಿಯಲ್‍ 2:44ರಲ್ಲಿ ಹೇಳಿರುವ) ಐದು ಮಹಾ ಚಕ್ರಾಧಿಪತ್ಯಗಳಲ್ಲಿ ಕೊನೆಯದು; ಪಂಚಮ ಸಾಮ್ರಾಜ್ಯ.
  3. Fifth-monarchy-man ಪಂಚಮ ಸಾಮ್ರಾಜ್ಯೋತ್ಸಾಹಿ; ಕ್ರಿಸ್ತನು ಕೂಡಲೆ ಎರಡನೆಯ ಸಲ ಅವತರಿಸಿರುವನೆಂದು ನಿರೀಕ್ಷಿಸುತ್ತಾ ಇತರ ಎಲ್ಲಾ ಸರ್ಕಾರವನ್ನೂ ನಿರಾಕರಿಸುತ್ತಿದ್ದ 17ನೆಯ ಶತಮಾನದ ಉತ್ಕಟ ಅಭಿಮಾನಿ.