fiery ಹೈಅರಿ
ಗುಣವಾಚಕ
  1. ಬೆಂಕಿಯಿಂದ ಕೂಡಿದ; ಬೆಂಕಿಯುಳ್ಳ.
  2. ಉರಿಯುತ್ತಿರುವ; ಜ್ವಲಿಸುತ್ತಿರುವ; ಧಗಧಗಿಸುವ: the fiery interior of a furnace ಕುಲುಮೆಯ ಉರಿಯುತ್ತಿರುವ ಒಳ ಭಾಗ.
  3. (ಬಾಣ ಮೊದಲಾದವುಗಳ ವಿಷಯದಲ್ಲಿ) ಬೆಂಕಿ ಹೊತ್ತಿರುವ; ಉರಿ ಕಾರುವ.
  4. ಬೆಂಕಿಯಂತೆ ಕಾಣುವ; ಕೆಂಪಗೆ ಜ್ವಲಿಸುವ: a fiery sunset ಕೆಂಪಗೆ ಜ್ವಲಿಸುವ ಸೂರ್ಯಾಸ್ತ.
  5. (ಕಣ್ಣು) ಕಿಡಿಕಾರುವ; ಉರಿಯುವ; ಸುಡುವ; ಜ್ವಲಂತ; ಉಜ್ಜ್ವಲ.
  6. ಬೆಂಕಿಯಂತೆ ಕಾದ; ಸುಡುತ್ತಿರುವ; ಬೆಂಕಿಬಿಸಿಯಾದ: fiery desert sands ಸುಡುಸುಡುವ ಮರುಭೂಮಿಯ ಮರಳು.
  7. ಬೆಂಕಿಯಂಥ; ಕೆರಳಿಸುವ; ಉರಿಯುಂಟುಮಾಡುವ: fiery taste ಉರಿಯುವ ರುಚಿ.
  8. ತೀಕ್ಷ್ಣ; ತವಕಿಸುವ; ಉತ್ಕಟ: fiery zeal ಉತ್ಕಟ ಉತ್ಸಾಹ.
  9. ಮೇಲೆ ಬೀಳುವ ಸ್ವಭಾವದ; ಆಕ್ರಮಣಕಾರಿ; ಜಗಳಗಂಟಿ.
  10. ಆವೇಶದ; ಕಾವಿನ; ಹುರುಪಿನ; ಕೆಚ್ಚಿನ: fiery courage ಆವೇಶದ ಧೈರ್ಯ.
  11. ರೇಗುವ; ಮುಂಗೋಪದ; ಸಿಡುಕಿನ: a fiery personality ಸಿಡುಕು ಸ್ವಭಾವದ ವ್ಯಕ್ತಿ.
  12. (ಕುದುರೆ) ಜೋರಿನ; ಮುಡಕಿನ; ಚುರುಕಾದ.
  13. (ಅನಿಲದ ವಿಷಯದಲ್ಲಿ) ದಹ್ಯ; ಹೊತ್ತಿಕೊಳ್ಳುವ.
  14. (ಗಣಿಯ ವಿಷಯದಲ್ಲಿ) ಸ್ಫೋಟಕ; ಸಿಡಿಯುವ; ಸ್ಫೋಟಿಸಬಹುದಾದ.
  15. (ಕ್ರಿಕೆಟ್‍ ಪಿಚ್ಚಿನ ವಿಷಯದಲ್ಲಿ) ಚೆಂಡನ್ನು ಅಪಾಯಕರವಾಗಿ ಪುಟವೇಳಿಸುವ.
  16. (ಕುರು, ಹುಣ್ಣು, ಬಾವುಗಳ ವಿಷಯದಲ್ಲಿ) ಕೆರಳಿದ: a fiery boil ಕೆರಳಿದ ಕುರು.