fiend ಹೀಂಡ್‍
ನಾಮವಾಚಕ
  1. ದೆವ್ವ; ಸೈತಾನ.
  2. ಭೂತ; ಪಿಶಾಚಿ.
  3. ಅಮಾನುಷ ಕ್ರೂರಿ; ನರರಾಕ್ಷಸ; ಪಿಶಾಚಿ (ಅನೇಕವೇಳೆ ಹಾಸ್ಯ ಪ್ರಯೋಗ): the interviewer fiend ಸಂದರ್ಶಕ ಪಿಶಾಚಿ; ಭೇಟಿಗೆ ಬಂದಿರುವ ಪಿಶಾಚಿ.
  4. ಆತ್ಯಾಸಕ್ತ; ಗೀಳಿನವ; ಚಟದವ; ಭಕ್ತ; ದಾಸ; ವ್ಯಸನಿ; ಯಾವುದೇ ಚಾಳಿಗೆ ತುತ್ತಾದವನು: fresh-air fiend ನಿರ್ಮಲ ವಾಯುಚಪಲಿ; ಸ್ವಚ್ಛ ಗಾಳಿಯನ್ನು ಬಹಳ ಬಯಸುವವನು. dope fiend ಮಾದಕ(ವಸ್ತು) ವ್ಯಸನಿ. morphia fiend ಅಹೀಮು ಭಕ್ತ; ಅಹೀಮನ್ನು ಅತಿಯಾಗಿ ಸೇವಿಸುವವ.
  5. (ಅನೌಪಚಾರಿಕ) ತಂಟೆ ಯಾ ಕಾಟಕೊಡುವ ವ್ಯಕ್ತಿ ಯಾ ವಸ್ತು: those children are little fiends ಆ ಮಕ್ಕಳು ಪುಟ್ಟ ತಂಟೆಕೋರರು.
  6. ನಿಸ್ಸೀಮ; ಬಹುಜಾಣ; ಮಹಾಕುಶಲಿ; ಯಾವುದೇ ಕೌಶಲ ಯಾ ವಿದ್ಯೆಯಲ್ಲಿ ತುಂಬ ಜಾಣನಾಗಿರುವವ: a fiend at mathematics ಗಣಿತದಲ್ಲಿ ನಿಸ್ಸೀಮ.