fiction ಹಿಕ್‍ಷನ್‍
ನಾಮವಾಚಕ
  1. ಕಲ್ಪಿಸುವುದು; ಸೃಷ್ಟಿಸುವುದು; ಕಲ್ಪನೆ; ಸೃಷ್ಟನೆ.
  2. ಕಲ್ಪಿಸಿದುದು; ಹುಟ್ಟಿಸಿ ಹೇಳಿದ್ದು; ಕಲ್ಪಿಸಿದ ಹೇಳಿಕೆ; ಕಲ್ಪಿತ ಕಥನ; ಕಟ್ಟುಕಥೆ: the fiction of her being in delicate health ಅವಳ ಆರೋಗ್ಯ ನಾಜೂಕೆಂಬ ಕಟ್ಟುಕಥೆ.
  3. (ಅಂಥ) ಕಲ್ಪಿತ – ಕಥನ, ಸಾಹಿತ್ಯ, ಮುಖ್ಯವಾಗಿ ಕಾದಂಬರಿಗಳು: detective fiction ಪತ್ತೇದಾರಿ ಕಾದಂಬರಿಗಳು.
  4. ಕಲ್ಪಿತಸತ್ಯ; ಕಾಲ್ಪನಿಕ ಸತ್ಯ; ಸಮ್ಮತ ಮಿಥ್ಯೆ; ವಾಸ್ತವವಲ್ಲದಿದ್ದರೂ ವ್ಯವಹಾರಕ್ಕಾಗಿ, ವ್ಯಾವಹಾರಿಕವಾಗಿ ಸತ್ಯವೆಂದು ಅಂಗೀಕರಿಸುವ ವಿಷಯ; ರೂಢಿಯಲ್ಲಿ ಒಪ್ಪಿಕೊಂಡು ಬಂದ ಸುಳ್ಳು: polite fiction ಔಪಚಾರಿಕ – ಮಿಥ್ಯೆ; ಸತ್ಯಕಲ್ಪನೆ; ನಿಜವಲ್ಲದಿದ್ದರೂ ಉಪಚಾರಕ್ಕಾಗಿ ಸತ್ಯವೆಂದು ಪರಿಗಣಿಸುವ ವಿಷಯ.
  5. ಆಧಾರವಿಲ್ಲದ, ಹುಟ್ಟಿಸಿಹೇಳಿದ, ಮೋಸಮಾಡುವ ಹೇಳಿಕೆ: the fictions on a bottle of patent medicine ಪೇಟೆಂಟು ಔಷಧಿ ಸೀಸೆಯ ಮೇಲಿನ ಬುಡವಿಲ್ಲದ ಹೇಳಿಕೆಗಳು.
  6. ಆಧಾರವಿಲ್ಲದ, ಬುಡವಿಲ್ಲದ – ನಂಬಿಕೆ, ಅಭಿಪ್ರಾಯ: the fictions that go to make a man’s public reputation ಒಬ್ಬ ವ್ಯಕ್ತಿಯ ಖ್ಯಾತಿಗೆ ಕಾರಣವಾದ ನಿರಾಧಾರ ನಂಬಿಕೆಗಳು.
  7. (ಉಪಯುಕ್ತವಾದ) ಭ್ರಮೆ ಯಾ ನೆಪ: it was only a fiction of independence his mother gave him ಅವನ ತಾಯಿ ಅವನಿಗೆ ಕೊಟ್ಟದ್ದು ಸ್ವಾತಂತ್ರ್ಯದ ಭ್ರಮೆ ಮಾತ್ರ.
ಪದಗುಚ್ಛ

legal fiction ಕಾನೂನಿನ – ಮಿಥ್ಯೆ, ಕಾಲ್ಪನಿಕ ಸತ್ಯ; ನಿಜದಲ್ಲಿ ಒಂದು ಸಂಗತಿ ನಡೆಯದಿದ್ದರೂ ಕಾನೂನಿನ ದೃಷ್ಟಿಯಲ್ಲಿ ಅದು ನಡೆದಿರುವಂತೆ ಇಟ್ಟುಕೊಳ್ಳುವುದು, ಉದಾಹರಣೆಗೆಒಬ್ಬನ ವಿಳಾಸ ತಿಳಿಯದಿರುವಾಗ ಅವನ ಮೇಲೆ ಜಾರಿ ಮಾಡಬೇಕಾದ ಸಮನ್ಸನ್ನು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸಿ ಅದು ಜಾರಿಯಾದಂತೆ ಭಾವಿಸುವುದು.