See also 2few
1few ಹ್ಯೂ
ಗುಣವಾಚಕ

ಕೆಲವು; ಹೆಚ್ಚು ಸಂಖ್ಯೆಯಲ್ಲದ: a man of few words ಹೆಚ್ಚು ಮಾತನಾಡದ ವ್ಯಕ್ತಿ; ಮಿತಭಾಷಿ. he spoke a few words ಅವನು ಒಂದೆರಡು ಮಾತುಗಳನ್ನಾಡಿದ. visitors are few ಭೇಟಿ ಮಾಡುವವರು ಎಲ್ಲೋ ಕೆಲವರು, ವಿರಳ.

ಪದಗುಚ್ಛ
  1. a few ಕೆಲವು: a few words should be added ಕೆಲವು ಮಾತುಗಳನ್ನು ಸೇರಿಸಬೇಕು. a few of his friends were there ಅವನ ಕೆಲವು ಜನ ಸ್ನೇಹಿತರು ಅಲ್ಲಿದ್ದರು.
  2. a good few (ಆಡುಮಾತು) ತಕ್ಕಷ್ಟು ಹೆಚ್ಚು ಸಂಖ್ಯೆಯ.
  3. every few days etc. ಕೆಲವು ದಿನಗಳಿಗೊಮ್ಮೆ.
  4. quite a few = ಪದಗುಚ್ಛ \((2)\).
ನುಡಿಗಟ್ಟು
  1. few and far between ಅಲ್ಲೊಂದು ಇಲ್ಲೊಂದು.
  2. have a few (ಆಡುಮಾತು) ಹಲವಾರು ಬಗೆಯ ಮದ್ಯಗಳನ್ನು ಸೇವಿಸು, ತೆಗೆದುಕೊ.
  3. in few (ಪ್ರಾಚೀನ ಪ್ರಯೋಗ) ಸ್ವಲ್ಪದರಲ್ಲಿ; ಕೆಲವೇ ಮಾತಿನಲ್ಲಿ; ಸಂಗ್ರಹವಾಗಿ; ಸಂಕ್ಷೇಪವಾಗಿ.
  4. no fewer than (ನಿರ್ದಿಷ್ಟ ಸಂಖ್ಯೆಯಲ್ಲಿ) ಕಡಮೆಯಿಲ್ಲದಷ್ಟು; ಅಷ್ಟು: no fewer than twenty workers were absent through illness ಕಾಯಿಲೆಯಿಂದಾಗಿ 20 ಜನ ಕೆಲಸಗಾರರು ಬಂದಿರಲಿಲ್ಲ.
  5. not a few
    1. ಬಹುಜನ.
    2. ಬಹು; ಅನೇಕ.
  6. some few ಎಲ್ಲೋ ಕೆಲವರು; ಎಲ್ಲೋ ಕೆಲವು ಮಂದಿ.
  7. the few
    1. ಅಲ್ಪಸಂಖ್ಯಾಕರು.
    2. (ಆರಿಸಿದ) ಕೆಲವೇ ಶ್ರೇಷ್ಠ ಜನರು.
See also 1few
2few ಹ್ಯೂ
ನಾಮವಾಚಕ
  1. ಕೆಲವರು.
  2. ಕೆಲವು.