fetishism ಹೀ(ಹೆ)ಟಿಷಿಸಮ್‍
ನಾಮವಾಚಕ
  1. ಮಾಂತ್ರಿಕ ವಸ್ತು ಪೂಜಾಪದ್ಧತಿ; (ಮಾಂತ್ರಿಕಶಕ್ತಿಯಿದೆಯೆಂದೋ ಯಾವುದೋ ಭೂತ ನೆಲೆಸಿದೆಯೆಂದೋ ನಂಬಿ) ಒಂದು ನಿರ್ಜೀವ ವಸ್ತುವನ್ನು ಪೂಜಿಸುವ ಪದ್ಧತಿ ಯಾ ಅದರಲ್ಲಿನ ಮೂಢನಂಬಿಕೆ.
  2. (ಮನಶ್ಶಾಸ್ತ್ರ) ಅಪಸಾಮಾನ್ಯ ಕಾಮೋದ್ದೀಪನ ಯಾ ಲೈಂಗಿಕ ಪ್ರಚೋದನೆ; ಪಾದರಕ್ಷೆ, ರಬ್ಬರು, ಒಳಉಡುಪು, ಮೊದಲಾದ ನಿರ್ಜೀವ ವಸ್ತುಗಳಿಂದಲೋ, ಪಾದ, ಕೂದಲು, ಮೊದಲಾದ ದೇಹದ ಅಲೈಂಗಿಕ ಭಾಗಗಳಿಂದಲೋ ಲೈಂಗಿಕ ಪ್ರಚೋದನೆಯಾಗುವ ಒಂದು ಬಗೆಯ ಕಾಮವಿಕಾರ.