fetish ಹಿ(ಹೆ)ಟಿಷ್‍
ನಾಮವಾಚಕ
  1. ಮಾಂತ್ರಿಕವಸ್ತು; ಮಾಂತ್ರಿಕ ಶಕ್ತಿಯಿದೆಯೆಂಬ ಯಾ ಯಾವುದೋ ಭೂತ ನೆಲೆಸಿದೆಯೆಂಬ ನಂಬಿಕೆಯಿಂದ ಕಾಡುಜನರು, ಅನಾಗರಿಕರು ಪೂಜಿಸುವ ಯಾವುದೇ ನಿರ್ಜೀವ ವಸ್ತು.
  2. ಅವೈಜ್ಞಾನಿಕವಾಗಿ ಅಥವಾ ವಿವೇಚನಾಶೂನ್ಯರಾಗಿ ಪೂಜನೀಯವೆಂದು ನಂಬಿದ ಯಾವುದೇ ತತ್ತ್ವ ಮೊದಲಾದವು; ಅಂಧಶ್ರದ್ಧೆಯಿಟ್ಟು ನಂಬಿದ ತತ್ತ್ವ ಮೊದಲಾದವು.
  3. (ಮನಶ್ಶಾಸ್ತ್ರ) ಅಪಸಾಮಾನ್ಯ ಕಾಮೋದ್ದೀಪಕ; ಲೈಂಗಿಕ ಪ್ರಚೋದಕ ; ಲೈಂಗಿಕ ಕಾಮನೆಗೆ ಪ್ರಚೋದಕವಾಗುವ ವಸ್ತು ಯಾ ದೇಹದ ಅಲೈಂಗಿಕ ಭಾಗ (ಉದಾಹರಣೆಗೆ ಕೂದಲು ಮೊದಲಾದವು).